Kumadvathi Apparel Training & Design Center, Shikaripura

Kumadvathi Apparel Training & Design Center

Shikaripura
  08187-224133
  kumadvathiatdc@gmail.com
ಕುಮದ್ವತಿ ಸಿದ್ಧ ಉಡುಪು ತರಬೇತಿ ಹಾಗೂ ಉತ್ಪಾದನಾ ಕೇಂದ್ರ > News and Events > 69ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ – 2015

69ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ – 2015

ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ 69ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕಾರಿಪುರ ಕ್ಷೇತ್ರದ ಶಾಸಕರು ಹಾಗೂ ನಮ್ಮ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಿ. ವೈ ರಾಘವೇಂದ್ರರವರು ದ್ವಜಾರೋಹಣ ನಡೆಸಿ, ದೇಶದ ಮಹಾ ಪುರುಷರನ್ನು ಸ್ಮರಿಸುವ ಮೂಲಕ ದಿನಾಚರಣೆಯನ್ನು ಆಚರಿಸಿ ಎಂದು ಹೇಳಿದರು. ವರ್ಷದಲ್ಲಿ ಒಂದು ದಿನ ದೇಶದ ಎಲ್ಲ ಜನ ಒಂದೇ ಸಮಯದಲ್ಲಿ ಸಂತೋಷದಿಂದ ಆಚರಿಸುವ ಈ ಹಬ್ಬದಲ್ಲಿ ನಾವುಗಳು ದೇಶಕ್ಕೋಸ್ಕರ ಸಂಕಲ್ಪ ಮಾಡಬೇಕಾಗಿದೆ. ಸಂಪದ್ಬರಿತವಾದ ನಮ್ಮ ರಾಷ್ಟ್ರ ಬ್ರಿಟೀಷರ ಆಗಮನದಿಂದ ಸಂಪತ್ತು ಕಳೆದುಕೊಳ್ಳುವಂತಾಯಿತು. ಅನೇಕ ಮಹಾನ್ ವ್ಯಕ್ತಿಗಳ ತ್ಯಾಗ ಬಲಿದಾನದಿಂದಾಗಿ ಸ್ವಾತಂತ್ರ್ಯ ಪಡೆದ ನಮ್ಮ ದೇಶ ಇಂದು ಉಗ್ರಗಾಮಿ, ಬ್ರಷ್ಠಾಚಾರ, ಇತ್ಯಾದಿಯಿಂದಾಗಿ ಅಭಿವೃದ್ದಿ ಹೊಂದುವಲ್ಲಿ ಕುಂಟಿತವಾಗುತ್ತಿದೆ ಇದನ್ನು ಮನಗಂಡು ಪ್ರತಿಯೊಬ್ಬರು ದೇಶಕ್ಕಾಗಿ ಎನನ್ನಾದರು ಕೊಡುಗೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅದ್ಯಕ್ಷರಾದ ಶ್ರೀ ಎಂ. ಬಿ. ಶಿವಕುಮಾರ್, ನಿರ್ದೇಶಕಿಯಾದ ಶ್ರೀಮತಿ ತೇಜಸ್ವಿನಿ ರಾಘವೇಂದ್ರ, ಮುಖ್ಯಸ್ಥರಾದ ಶ್ರೀ ಕೆ. ಕುಬೇರಪ್ಪ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು, ಸಿಬ್ಬಂಧಿವರ್ಗದರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ind2 ind1