ತರಬೇತಿಯ ವಿಷಯ ಮತ್ತು ಅವಧಿ
ಕುಮದ್ವತಿ ಸಿದ್ಧ ಉಡುಪು ತರಬೇತಿ ಹಾಗೂ ಉತ್ಪಾದನಾ ಕೇಂದ್ರ ಶಿಕಾರಿಪುರ ತಾಲ್ಲೂಕಿನಾದ್ಯಂತ ಅನೇಕ ಹಳ್ಳಿಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ 960 ಅಭ್ಯರ್ಥಿಗಳಿಗೆ ತರಬೇತಿಗಳನ್ನು ನೀಡಿದೆ. ಅವುಗಳಲ್ಲಿ 100 ಕ್ಕೆ 80ರಷ್ಟು ಮಹಿಳೆಯರು ಲಾಭವನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತದಲ್ಲಿ , 100 ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಬೆಂಗಳೂರಿನ ವಿವಿಧ ಕೈಗಾರಿಕೆಗಳಲ್ಲಿ 150 ಅಭ್ಯರ್ಥಿಗಳಿಗೆ ನಮ್ಮ ಉತ್ಪಾದನಾ ಕೇಂದ್ರ ಹಾಗೂ ಸ್ಥಳೀಯ ಕೈಗಾರಿಕೆಗಳಲ್ಲಿ ಉದ್ಯೋಗವಕಾಶ ಕಲ್ಪಿಸಿದ್ದು, 350ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆ. ಪ್ರಸ್ತುತ ನಾವು ನೀಡುತ್ತಿರುವ ತರಬೇತಿಗಳು ಕೆಳಕಂಡಂತಿದೆ.
1. ಸೀವಿಂಗ್ ಮಷಿನ್ ಆಪರೇಟರ್ ತರಬೇತಿ – 1 ತಿಂಗಳು
2. ಹೊಲಿಗೆ ತರಬೇತಿ – 2 ತಿಂಗಳು
3. ಕರಕುಶಲ ವಸ್ತುಗಳ ತಯಾರಿಕೆ ತರಬೇತಿ (ಕೌಶಲ್ಯ) – 2 ತಿಂಗಳು
ಎಲ್ಲಾ ರೀತಿಯ ತರಬೇತಿಗೂ ಕನಿಷ್ಟ ಶುಲ್ಕ ನಿಗದಿ ಮಾಡಿದ್ದು ಆರ್ಥಿಕ ದುರ್ಬಲರಿಗೆ ಕಲಿಕಾ ಶುಲ್ಕದಲ್ಲಿ ರಿಯಾಯ್ತಿ ಇರುತ್ತದೆ. ಸಮುದಾಯದ ಯುವ ಜನರು ಆಸಕ್ತ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಿ ಆರ್ಥಿಕ ಸ್ವಾವಲಂಬನೆಗೆ ದಾರಿ ಮಾಡಿಕೊಡುವುದೇ ನಮ್ಮ ಸಂಸ್ಥೆ ಮತ್ತು ತರಬೇತಿ ಕೇಂದ್ರದ ಗುರಿಯಾಗಿದೆ
ಹೆಚ್ಚಿನ ವಿವರಗಳಿಗಾಗಿ ನಮ್ಮ ಕಛೇರಿಯನ್ನು ಸಂಪರ್ಕಿಸಿ:
ಕುಮದ್ವತಿ ಸಿದ್ಧ ಉಡುಪು ತರಬೇತಿ ಹಾಗೂ ಉತ್ಪಾದನಾ ಕೇಂದ್ರ
ಕುಮದ್ವತಿ ಕ್ಯಾಂಪಸ್, ಶಿವಮೊಗ್ಗ ರೋಡ್,
ಶಿಕಾರಿಪುರ, ಶಿವಮೊಗ್ಗ -577427
ಫೋನ್ ನಂಬರ್ : 08187-224133, ಮೊಬೈಲ್ : 9980890726
ಕ್ರ.ಸಂ | ತರಬೇತಿಯ ಹೆಸರು | ಅಭ್ಯರ್ಥಿಗಳ ಸಂಖ್ಯೆ | ಅವಧಿ | ಒಟ್ಟು ಮೊತ್ತ (ಪ್ರತಿ ಅಭ್ಯರ್ಥಿಗೆ) |
1 | ಬೇಸಿಕ್ ಸೀವಿಂಗ್ ಮಷಿನ್ ಆಪರೇಟರ್ (SMART) | 25 | 2 ತಿಂಗಳು | 2500 |
2 | ಆಪರೇಟರ್ ಬೇಸಿಕ್ +ಅಡ್ವಾನ್ಸ್ | 25 | 2 ತಿಂಗಳು | 3೦೦೦ |
ಸೂಚನೆ : ಮೇಲ್ಕಂಡ ಕ್ರಿಯಾ ಯೋಜನೆಯಲ್ಲಿ 25 ಜನ ಕಲಿಕಾರ್ಥಿಗಳಿಗೆ ತಗುಲಬಹುದಾದ ವೆಚ್ಚಕ್ಕೆ ಅನುಗುಣವಾಗಿ ತಯಾರಿಸಲಾಗಿದೆ. ಇದರಲ್ಲಿ ತರಬೇತಿ ಸಾಮಗ್ರಿಗಳು, ಕಚ್ಚಾ ಸಾಮಗ್ರಿಗಳು, ಪ್ರಯಾಣ ಭತ್ಯೆ, ಮೇಲ್ವಿಚಾರಣೆ, ತರಬೇತಿ ಸಿಬ್ಬಂಧಿಗಳ ವೇತನ, ಸಂಪನ್ಮೂಲ ವ್ಯಕ್ತಿಗಳ ಗೌರವ ಧನ, ದಾಖಲೀಕರಣ, ಪ್ರಮಾಣಪತ್ರ ಇತರೇ ವೆಚ್ಚಗಳನ್ನೊಳಗೊಂಡು ಪ್ರತಿ ಅಭ್ಯರ್ಥಿಗೆ ತಗುಲಬಹುದಾದ ಹಣವನ್ನು ನಮೂದಿಸಲಾಗಿದೆ.