ಕುಮದ್ವತಿ ಸಿದ್ಧ ಉಡುಪು ತರಬೇತಿ ಹಾಗೂ ಉತ್ಪಾದನಾ ಕೇಂದ್ರ
ಭಾರತ ದೇಶದಲ್ಲಿ ಬಹುಸಂಖ್ಯಾತ ಜನಗಳು ಆರ್ಥಿಕ ಹಾಗೂ ಸಾಮಾಜಿಕವಾಗಿ ಅನೇಕ ವರ್ಷಗಳಿಂದ ತುಳಿತಕ್ಕೆ ಒಳಗಾಗಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳು ಆದಿವಾಸಿಗಳು ಹಾಗೂ ಇತರೆ ಹಿಂದುಳಿದ ವರ್ಗಗಳು ಈ ಹಿಂದುಳಿದ ಜನ ಸಮುದಾಯಕ್ಕೆ ಸೇರುತ್ತಾರೆ. ಈ ಜನ ಸಮುದಾಯದ ಮಹಿಳೆಯರು ಪುರುಷರಿಗಿಂತ ಮತ್ತಷ್ಟು ಹಿಂದುಳಿದಿದ್ದಾರೆ. ಸಾಮಾಜಿಕವಾಗಿ ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡುವ ದೃಷ್ಠಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ.
ಅದೇರೀತಿ ಜವಳಿ ಕ್ಷೇತ್ರದಲ್ಲಿ ಸಿದ್ಧ ಉಡುಪು ಘಟಕಗಳಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಾಗಿದ್ದು ಅವಶ್ಯ ನುರಿತ ಕೆಲಸಗಾರ ಅಗತ್ಯತೆಯನ್ನು ಅರಿತು ರಾಜ್ಯ ಸರ್ಕಾರ ಸಿದ್ಧ ಉಡುಪು ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಮಗಹತ್ತರ ಯೋಜನೆ ಹಾಗೂ ಸಿದ್ಧ ಉಡುಪು ಉದ್ಯಮಕ್ಕೆ ಬೇಡಿಕೆ ಸೃಷ್ಟಿಸಿ ಆ ಮುಲಕ ನಾಡಿನ ಹಿಂದುಳಿದ ಮಹಿಳೆಯರಿಗೆ ಉದ್ಯೊಗ ಕಲ್ಪಿಸುವ ಮಹತ್ವದ ಉದ್ದೇಶವನ್ನು ಇಟ್ಟುಕೊಂಡು ಯೋಜನೆಯನ್ನು ರೂಪಸಿತು.
ಇಂತಹ ಯೋಜನೆಯನ್ನು ನಾಡಿಗೆ ನೀಡಿದ ಕರ್ನಾಟಕ ಸರ್ಕಾರದ ಅಂದಿನ ಮುಖ್ಯಮಂತ್ರಿ ಶ್ರೀ ಬಿ. ಎಸ್ ಯಡಿಯೂರಪ್ಪನವರು ರಾಜ್ಯದ ವಿವಿದ ಕಡೆಗಳಲ್ಲಿ ಸಿದ್ಧ ಉಡುಪು ತಯಾರಿಕಾ ಕೇಂದ್ರಗಳನ್ನು ತರೆಯಲು ಅವಕಾಶ ನೀಡಿದರು. ಈ ಯೋಜನೆ ಉಪಯೋಗವನ್ನು ಶಿಕಾರಿಪುರ ತಾಲ್ಲೂಕಿನ ಜನತೆಗೆ ದೊರಕಿಸಲು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಮತ್ತು ಜಿಲ್ಲಾ ಪಂಚಾಯತ್ ಶಿವಮೊಗ್ಗ ಇವುಗಳ ಸಹಯೋಗದೊಂದಿಗೆ ಕುಮದ್ವತಿ ಸಿದ್ಧ ಉಡುಪು ತರಬೇತಿ ಹಾಗೂ ಉತ್ಪಾದನಾ ಕೇಂದ್ರವನ್ನು ಶಿಕಾರಿಪುರದಲ್ಲಿ ಸ್ಥಾಪಿಸಲಾಯಿತು.