ಕುಮದ್ವತಿ ಪ್ರಥಮ ದರ್ಜೆ ಕಾಲೇಜಿಗೆ ಉತ್ತಮ ಪಲಿತಾಂಶ
ಶಿಕಾರಿಪುರ, ಜ. 12: ಕುವೆಂಪು ವಿ. ವಿ ಯಲ್ಲಿ 2015-16 ನೇ ಸಾಲಿನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಸೆಮಿಸ್ಟರ್ ಬಿ.ಎಸ್ಸಿ ವಿಭಾಗದಲ್ಲಿ 8 ಡಿಸ್ಟಿಂಕ್ಷನ್, 24 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ತೃತೀಯ ಸೆಮಿಸ್ಟರ್ ಬಿ.ಎಸ್ಸಿ ವಿಭಾಗದಲ್ಲಿ 10 ಡಿಸ್ಟಿಂಕ್ಷನ್, 26 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದು ಮತ್ತು ಐದನೇ ಸೆಮಿಸ್ಟರ್ ಬಿ.ಎಸ್ಸಿ ವಿಭಾಗದಲ್ಲಿ 100% ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿರುತ್ತಾರೆ. ಬಿ.ಕಾಂ ವಿಭಾಗದ ಪ್ರಥಮ ಸೆಮಿಸ್ಟರ್ 17 ಡಿಸ್ಟಿಂಕ್ಷನ್, 22 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ತೃತೀಯ ಸೆಮಿಸ್ಟರ್ ನಲ್ಲಿ 5 ಡಿಸ್ಟಿಂಕ್ಷನ್, 32 ವಿದ್ಯಾರ್ಥಿಗಳು ಪ್ರಥಮ ದರ್ಜೆ ಮತ್ತು ಐದನೇ ಸೆಮಿಸ್ಟರ್‌ನಲ್ಲಿ 7 ಡಿಸ್ಟಿಂಕ್ಷನ್, 16 ವಿದ್ಯಾರ್ಥಿಗಳು ಪ್ರಥಮ ದರ್ಜೆಯ ಪಲಿತಾಂಶ ಪಡೆದಿರುತ್ತಾರೆ. ಐದನೇ ಸೆಮಿಸ್ಟರ್ ಬಿ.ಕಾಂ ವಿಭಾಗದಲ್ಲಿ ಕು. ಡಿವಿಜಾ ಶೆ.86, ತೃತೀಯ ಸೆಮಿಸ್ಟರ್‌ನಲ್ಲಿ ಕು.ಭಾಗ್ಯಶ್ರೀ ಬಿ.ಎಂ ಶೇ. ಶೇ.82 ಪ್ರಥಮ ಸೆಮಿಸ್ಟರ್‌ನಲ್ಲಿ ಆದರ್ಶ ಜಿ ಶೇ. 85, ಐದನೇ ಸೆಮಿಸ್ಟರ್ ಬಿ.ಎಸ್ಸಿ ವಿಭಾಗದಲ್ಲಿ, ಕು. ಮಂಗಳ ಗೌರಿ ಹಾಗೂ ಕು. ಪೂರ್ಣಿಮ.ಜಿ ಇವರು ಶೇ. 90 ತೃತೀಯ ಸೆಮಿಸ್ಟರ್‌ನಲ್ಲಿ ಕು. ಸೀಮಾ ಎಸ್.ಡಿ ಇವರು ಶೇ. 92 ಮತ್ತು ಪ್ರಥಮ ಸೆಮಿಸ್ಟರ್‌ನಲ್ಲಿ ವಾಣಿ ಟಿ.ಆರ್ ಶೇ. 85 ಅಂಕಗಳಿಸಿರುತ್ತಾರೆ.
ಶ್ಯೆಕ್ಷಣಿಕ ವರ್ಷದ ಬಿ.ಎಸ್ಸಿ ಐದನೇ ಸೆಮಿಸ್ಟರ್ ಶೇ.100% ಹಾಗೂ ತೃತಿಯ ಮತ್ತು ಪ್ರಥಮ ಸೆಮಿಸ್ಟರ್ ನಲ್ಲಿ ಶೇ. 80 ಪಲಿತಾಂಶ ಮತ್ತು ಬಿ.ಕಾಂ ವಿಭಾಗದ ಐದನೇ ಸೆಮಿಸ್ಟರ್ ಶೇ.86% ಹಾಗೂ ತೃತೀಯ ಮತ್ತು ಪ್ರಥಮ ಸೆಮಿಸ್ಟರ್ ಶೇ.93 ಮತ್ತು ಶೇ. 90 ಪಲಿತಾಂಶ ಪಡೆದಿರುತ್ತದೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದೆ.