ಭಾರತೀಯ ಸಾಹಿತ್ಯಕ್ಕೆ ಸ್ವಾಮಿ ವಿವೇಕಾನಂದರ ಕೊಡುಗೆ ಅಪಾರ – ಶ್ರೀಯುತ ಕಾಳಿಂಗ ಹೆಗಡೆ
ಆಧುನಿಕ ಭಾರತೀಯ ಹಾಗೂ ಹೊಸಗನ್ನಡ ಸಾಹಿತ್ಯ ಪ್ರೇರಣೆ ಗೊಳ್ಳುವಲ್ಲಿ ಸ್ವಾಮಿ ವಿವೇಕಾಂದರ ಕೊಡುಗೆ ಅಪಾರವಾಗಿದೆ ಎಂದು ನಗರದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಲೇಖಕರು ಹಾಗೂ ಕಾಳಿಂಗ ಪ್ರಕಾಶನದ ಪ್ರಕಾಶಕರು ಆದ ಶ್ರೀಯುತ ಕಾಳಿಂಗ ಹೆಗಡೆ ಯವರು ಮಾತನಾಡುತ್ತಾ ಹೊಸಪಿಳಿಗೆಯ ಹಾಗೂ ಆಧ್ಯಾತ್ಮಿಕ ಒಲವುಳ್ಳ ಲೇಖಕರಿಗೆ ಸನಾತನ ಸಂಸ್ಕೃತಿ ಹಾಗೂ ಸಂಸ್ಕಾರಗಳ ಪರಿಯಿಸುವಲ್ಲಿ ಸ್ವಾಮಿ ವಿವೇಕಾನಂದರ ಕೊಡುಗೆ ಆಪಾರವಾಗಿದ್ದು, ಇಂದಿನ ಯುವ ಜನಾಂಗ ಹಾಗೂ ಯುವ ಲೇಖಕರಿಗೆ ಸಾಹಿತ್ಯ ಪ್ರೇರಕರಾಗಿ ಸ್ವಾಮಿ ವಿವೇಕಾನಂದರ ಆದರ್ಶಗಳು ಆದರಣೀಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತ ಸಮನ್ವಯಾಧಿಕಾರಿಗಳಾದ ಶ್ರೀ ಕೆ.ಕುಬೇರಪ್ಪನವರು ಮಾತನಾಡುತ್ತಾ ಕುವೆಂಪುರವರಂತಹ ಮಹಾನ್ ಸಾಹಿತಿಗಳಿಗೂ ಸ್ವಾಮಿ ವಿವೇಕಾಂನದರು ಪ್ರೇರಣಿಯುಂಟು ಮಾಡಿದ್ದರು ಎಂದರು. ನಂತರ ಈ ಕಾರ್ಯಕ್ರಮದ ಸಲುವಾಗಿ ಆಯೋಜಿಸಿದ್ದು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ವಿನಾಯಕ ಕೆ.ಎಸ್ , ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದು ಶ್ರೀ ಕೋಟೋಜಿರಾವ್ ಸ್ವಾಗತಿಸಿ ಶ್ರೀ ಚೇತನಕುಮಾರ್ ವಂದಿಸಿದರು, ಕು.ಕಾವ್ಯ ಹಾಗೂ ಕು. ಇಂದ್ರ ಮಲ್ಲೂರ್ ನಿರೂಪಿಸಿದರು.