Kumadvathi First Grade College,  Shikaripura

Kumadvathi First Grade College

Shivamogga Road, Shikaripura
fb-circtwitter-circle
  9886840694
  kumadvathifgc@gmail.com
Kumadvathi First Grade College > News and Events > ವಿಶ್ವ ಒಝೋನ್ ದಿನಾಚರಣೆ

ವಿಶ್ವ ಒಝೋನ್ ದಿನಾಚರಣೆ

ozone-day ozone-day1

ಸುಮಾರು 1800 ಕಿ.ಮಿ ಹಬ್ಬಿರುವ ಪಶ್ಚಿಮ ಘಟ್ಟಗಳ ವ್ಯಾಪ್ತಿ ಪ್ರದೇಶದಲ್ಲಿ ಬರುವ ಅರಣ್ಯದ ವಿವಿದ ಕಾರಣಗಳಿಂದ ಒತ್ತುವರಿ ಆಗುತ್ತಿರುವುದು ವಿಷಾದನೀಯ ಸಂಗತಿ ಎಂದು ಪಶ್ಚಿಮ ಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಆಶೀಸರ್ ಅನಂತ ಹೆಗ್ಡೆ ಅಭಿಪ್ರಾಯ ವ್ಯಕ್ತ ಪಡಿಸಿದರು.
ಪಟ್ಟಣದ ಕುಮದ್ವತಿ ಪ್ರಥಮ ದರ್ಜೆಯ ಕಾಲೇಜಿನಲ್ಲಿ ನಡೆದ ವಿಶ್ವ ಒಝೋನ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತಾನಾಡಿ ಮಾನವ ಅರಣ್ಯ ಇರುವುದೆ ತನ್ನ ಉಪಯೋಗಕ್ಕೆ ಎಂಬಂತೆ ಬಳಸುತ್ತಿದ್ದಾನೆ ಕಾವೇರಿ ಸೇರಿದಂತೆ ಸಂಪೂರ್ಣ ದಕ್ಷಿಣ ಬಾರತಕ್ಕೆ ಪಶ್ಚಿಮ ಘಟ್ಟಗಳಿಂದ ಉಗಮವಾಗುವ ನದಿಗಳಿಂದ ನೀರು ಇವತ್ತು ಪೂರೈಕೆ ಆಗುತ್ತಿದೆ ಆದರೆ ಪಶ್ಚಿಮ ಘಟ್ಟಗಳ ಅರಣ್ಯ, ನದಿಗಳು, ತೊರೆಗಳು, ಕೆರೆಗಳು ನಾಶವಾಗುತ್ತಿವೆ. ಕೃಷಿ, ಅಭಿವೃದ್ದಿ ಚಟುವಟಿಕೆಗಳು ಸೇರಿದಂತೆ ವ್ಯಾಪಕವಾದ ಅರಣ್ಯ ನಾಶವನ್ನು ತಡೆಯದಿದ್ದರೆ ಮುಂದಿನ ಪೀಳಿಗೆ ಸಂಕಷ್ಟದಲ್ಲಿ ಇರಬೇಕಾಗುತ್ತದೆ ಎಂದು ಅವರು ನುಡಿದರು. ಶಿಕಾರಿಪುರದ ಚಂದ್ರಕಲ ಅರಣ್ಯ, ಹೊಸನಗರ ಸಮಿಪದ ದೇವರ ಕಾನು ಸೇರಿದಂತೆ ಒಟ್ಟು 1 ಲಕ್ಷ ಎಕರೆಯಷ್ಟು ಅರಣ್ಯ ಸಂಪತ್ತು ಕಣ್ಮರೆಯಾಗಿದೆ ಇನ್ನು ಉಳಿದಿರುವ ಅರಣವನ್ನಾದರು ಉಳಿಸುವ ಅಗತ್ಯವಿದೆ ಎಂದರು.
ವಿಶ್ವ ಒಝೋನ್ ದಿನಾಚರಣೆಯ ಅಂಗವಾಗಿ ನಡಿಸಿದ್ದ ಪ್ರಬಂದ ಸ್ಪರ್ದೆ ಹಾಗು ಚರ್ಚಾ ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಸಂಸ್ಥೆಯ ಸಮನ್ವಯ ಅಧಿಕಾರಿ ಕುಬೇರಪ್ಪ ಕೆ, ಪ್ರಾಚಾರ್ಯ ಲಿಂಗರಾಜ್, ಪ್ರಾಚಾರ್ಯರಾದ  ಡಾ. ವಿರೇಂದ್ರ,  ಡಾ. ವಿನಾಯಕ,  ಡಾ. ಜಯಶ್ರೀ ವಿ ಆರ್ ಮತ್ತಿತರು  ಹಾಜರಿದ್ದರು. ಕಾರ್ಯಕ್ರಮವನ್ನು ಕು ಸ್ನೆಹ ಹಾಗೂ ಪೂರ್ಣಿಮ ನಿರುಪಿಸಿದರು. ಡಾ. ವಿನಾಯಕ ಸ್ವಾಗತಿಸಿ, ಡಾ. ವಿರೇಂದ್ರ ವಂದಿಸಿದರು.