ಎನ್ ಎಸ್ ಎಸ್ ಶಿಬಿರ ಕಾರ್ಯಕ್ರಮ
ಯುವಕರನ್ನು ದೇಶದ ಸಂಪನ್ಮೂಲವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಎನ್ ಎಸ್ ಎಸ್ ಸಹಕಾರಿ ಎಂದು ಶ್ರೀ ಬಿ. ಶಿವಕುಮಾರ್, ತಹಶೀಲ್ದಾರ್ ಶಿಕಾರಿಪುರ ಹೇಳಿದರು.ತಾಲೂಕಿನ ಕಾಗಿನಲ್ಲಿಯಲ್ಲಿ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಶಿಬಿರಕ್ಕೆ ಚಾಲನೆ ನೀಡಿದ ಅವರು, ಯುವಕರು ಧೇಶದ ಶಕ್ತಿ ಅವರಲ್ಲಿ ಬೌದ್ಧಿಕ, ದೈಹಿಕ ಶಕ್ತಿ ಬಲವರ್ಧನೆ ಮಾಡಿದಲ್ಲಿ ಆರೋಗ್ಯವಂತ ದೇಶ ಕಟ್ಟುವುದಕ್ಕೆ ಸಾಧ್ಯವಿದೆ ಎಂದರು.
ಸದೃಢ ದೇಹದಲ್ಲಿ ಮಾತ್ರ ದೃಢ ಮನಸ್ಸು ಇರಲು ಸಾಧ್ಯ ಎನ್ನುವ ಸ್ವಾಮಿ ವಿವೇಕಾನಂದರ ವಾಣಿಯಂತೆ ಯುವಕರು ಏನೆಲ್ಲ ಐಶ್ವರ್ಯ ಪಡೆದರೂ ಆರೋಗ್ಯವಂತ ದೇಹವಿಲ್ಲದಿದ್ದರೆ ಪ್ರಯೋಜನಕ್ಕೆ ಬರುವುದಲ್ಲಿ. ಹೀಗಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಎನ್ ಎಸ್ ಎಸ್ ಶಿಬಿರಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿ ಜೀವನದಲ್ಲೇ ಸಮಾಜಸೇವೆ, ಉತ್ತಮ ಹವ್ಯಾಸ ರೂಢಿಸಿಕೊಳ್ಳಲು ಹಾಗೂ ಶ್ರಮದಾನದ ಮಹತ್ವ ತಿಳಿಯುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಶಿಬಿರದ ಉದ್ಘಾಟನೆ ಮತ್ತು ಅಧ್ಯಕ್ಷತೆ: ಶ್ರೀ ಬಿ. ಶಿವಕುಮಾರ್, ತಹಶೀಲ್ದಾರ್ ಶಿಕಾರಿಪುರ,
ಅತಿಥಿಗಳು : ಶ್ರೀ ಕೆ. ಬಿ ಕೌಳ್ಯರ್ ಉಪ. ತಹಶೀಲ್ದಾರ್ ಶಿಕಾರಿಪುರ,
ಶ್ರೀಮತಿ ಸರೋಜಮ್ಮ ಅಧ್ಯಕ್ಷರು ಗ್ರಾ.ಪಂ, ಕಾಗಿನಲ್ಲಿ
ಶ್ರೀ ಎಂ.ಡಿ. ರಾಮಾನಾಯ್ಕ ಮುಖ್ಯಯೋಪದ್ಯಾಯರು, ಕಾಗಿನಲ್ಲಿ.
ಪ್ರೋ. ಎಸ್.ಎಸ್.ಗದಗ್, ಶೈಕ್ಷಣಿಕ ಸಮನಾಯ್ವಧಿಕಾರಿಗಳು, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಶಿಕಾರಿಪುರ.
ಉಪಸ್ಥಿತಿ : ಡಾ|| ವಿನಾಯಕ ಕೆ. ಎಸ್ ಪ್ರಾಚಾರ್ಯರು ಮತ್ತು ಕಾಲೇಜಿನ ಎಲ್ಲ ಸಿಬಂದ್ಧಿಗಳು, ಕುಮದ್ವತಿ ಪ್ರಥಮ ದರ್ಜೆ ಕಾಲೇಜು, ಶಿಕಾರಿಪುರ.