2015-16 ನೇ ಸಾಲಿನ ವಿವಿದ ವಿದ್ಯಾರ್ಥಿ ಸಂಘದ ಉಧ್ಘಾಟನೆ ಕಾರ್ಯಕ್ರಮ
ಸ್ವಾಮಿ ವೇಕಾನಂದ ವಿದ್ಯಾಸಂಸ್ಥೆ, ಶಿಕಾರಿಪುರ ಇದರ ಅಂಗ ಸಂಸ್ಥೆಗಳ ವತಿಯಿಂದ 2015-16 ನೇ ಸಾಲಿನ ವಿವಿದ ವಿದ್ಯಾರ್ಥಿ ಸಂಘದ ಉಧ್ಘಾಟನೆ ನಡೆಯಿತು.
ಈ ಒಂದು ಕಾರ್ಯಕ್ರಮದಲ್ಲಿ ಶಿಕಾರಿಪುರ ತಾಲ್ಲೂಕಿನ ಸಂಸದರಾದ ಶ್ರೀ ಬಿ ವೈ ರಾಘವೇಂದ್ರ, ಬಾಲ ವಿಜ್ಞಾನ ಪತ್ರಿಕೆ ಮುಖ್ಯ ಸಂಪಾದಕ ಶೇಖರ್ ಗೌಳೇರ್, ಸಂಸ್ಥೆಯ ಅಧ್ಯಕ್ಷರಾದ ಎಂ ಬಿ. ಶಿವಕುಮಾರ್, ನಿರ್ದೇಶಕಿ ತೇಜಸ್ವಿನಿ ರಾಘವೇಂದ್ರ, ಆಡಳಿತಾಧಿಕಾರಿ ಕುಬೇರಪ್ಪ ಕೆ, ಪ್ರಾಚಾರ್ಯರಾದ ಡಾ. ವಿನಾಯಕ ಉಪಸ್ಥಿತರಿದ್ದರು.
ಶಿಕಾರಿಪುರ ತಾಲ್ಲೂಕಿನ ಸಂಸದರಾದ ಶ್ರೀ ಬಿ ವೈ ರಾಘವೇಂದ್ರ ಮಾತಾನಾಡಿ ಸಾಧನೆ ಸಾಧಕನ ಸ್ವತ್ತಾಗಬೇಕು, ಬದಲಾಗಿ ಸೋಮಾರಿಗಳ ಸ್ವತ್ತು ಆಗಿರಬಾರದು, ವಿದ್ಯಾರ್ಥಿ ಸಂಘದ ಉಧ್ಟಾಟನೆಯಂತಹ ಕಾರ್ಯಕ್ರಮಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಪರಿಚಯಿಸಬೇಕು. ನಾಡು ನುಡಿ ಕಲೆಯನ್ನು ಪ್ರೀತಿಸಿ ಗೌರ”ವಿಸುವಂತಹ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಎಂದು ಹೇಳಿದರು.
ಸಾಹಿತ್ಯ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಶಿವಮೊಗ್ಗ ಜಿಲ್ಲೆ ಹೆಸರು ಮಾಡಿದೆ ಇಂತಹ ಜಿಲ್ಲೆಯಲ್ಲಿ ಹುಟ್ಟಿರುವ ನಾವುಗಳು ಅದನ್ನು ಉಳಿಸಿ ಬೆಳೆಸುವಂತಹ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ನೀನಾಸಂ ನಿರ್ದೇಶಕ ಅಕ್ಷರ ಕೆ.ವಿ ಮಾತನಾಡಿ, ರೈತ ಆತ್ಮಹತ್ಯೆ ಇತ್ತಿಚಿನ ದೊಡ್ಡ ಸಮಸ್ಯೆಯಾಗಿದೆ. ನಮ್ಮಲ್ಲಿ ಕೊರತೆಯಾಗಿರುವ ಸಂಸ್ಕಾರ ಇದಕ್ಕೆ ಮುಖ್ಯ ಕಾರಣ. ನಾವು ನಮ್ಮ ನಾಡು ನುಡಿ ಸಂಸ್ಕ್ರತಿಯನ್ನು ಮರೆಯುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ಇದನ್ನು ನಾವು ಬೆಳೆಸಬೇಕು. ಶಿಕ್ಷಣ ಪಡೆದ ವಿದ್ಯಾರ್ಥಿಗಳು ನಗರ ಪ್ರದೇಶಗಳಿಗೆ ವಲಸೆ ಹೋಗದೆ ತಮ್ಮ ಊರುಗಳಲ್ಲಿಯೇ ಜೀವನವನ್ನು ನಡೆಸಬೇಕು ಎಂದು ಹೇಳಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕ್ರತ ಚಿದಂಬರರಾವ್ ಜಂಬೆ ಮಾತಾನಾಡಿ, ಮಕ್ಕಳಿಗೆ ಪರೀಕ್ಷೆ ನಡೆಸಿ ಅಂಕ ನೀಡುವ ಮೂಲಕ ಅಳೆಯುವ ಪದ್ದತಿಯನ್ನು ಬದಲಾಯಿಸಬೇಕು. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ ಅದನ್ನು ಗುರುತಿಸುವ ಮೂಲಕ ಅತನನ್ನು ಅಳೆಯಬೇಕು ಎಂದು ಹೇಳಿದರು. ಡಾ. ವಿನಾಯಕ ಸ್ವಾಗತಿಸಿ, ಚೇತನ್ ವಂದಿಸಿ, ಕೋಟೋಜಿರಾವ್ ನಿರೂಪಿಸಿದರು.