ವಿಶ್ವ ಒಝೋನ್ ದಿನಾಚರಣೆ
ನಗರದ ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ಕುಮದ್ವತಿ ಪ್ರಥಮ ದರ್ಜೇ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಹಯೋಗದಿಂದ ಇತ್ತಿಚೆಗೆ ವಿಶ್ವ ಒಝೋನ್ ದಿನಾಚರಣೆಯನ್ನು ಅಚರಿಸಲ್ಪಟ್ಟಿತು. ಈ ಕಾರ್ಯಕ್ರಮದಲ್ಲಿ ಖ್ಯಾತ ಪರಿಸರವಾದಿಗಳು ಮತ್ತು ಪಶ್ಚಿಮ ಘಟ್ಟ ಕಾರ್ಯಪಡೆ ಸದಸ್ಯರಾದ ಡಾ. ಬಿ ಎಂ. ಕುಮಾರ ಸ್ವಾಮಿ, ಬಾಲ ವಿಜ್ಞಾನ ಪತ್ರಿಕೆಯ ಸಂಪದಕರಾದ ಡಾ. ಶೇಖರ್ ಗೌಳೇರ್, ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಶ್ರೀ ಕುಬೇರಪ್ಪ ಕೆ ಹಾಗೂ ಪ್ರಾಂಶುಪಾಲರಾ ಡಾ. ವಿನಾಯಕ ಕೆ ಎಸ್ ಇವರು ಬಾಗವಹಿಸಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದ ಡಾ. ಬಿ ಎಂ. ಕುಮಾರ ಸ್ವಾಮಿ ಮಾನವನ ಸುಗಮ ಜೀವನಕ್ಕೆ ಕಂಡುಕೊಂಡ ಕೆಲವು ವಸ್ತುಗಳಾದ ಹವಾ ನಿಯಂತ್ರಕಗಳು, ರೆಫ್ರೀಜರೇಟರ್ ಗಳಿಂದ ಬಿಡುಗಡೆಯಾಗುವ ಕ್ಲೋರೋಫ್ಲೋರೋಕಾರ್ಬನ್ ಗಳಿಂದ ಒಝೋನ್ ಪದರ ರಂಧ್ರವಾಗುತ್ತಿದ್ದು ಇನ್ನು 25 ವರ್ಷಗಳಲ್ಲೆ ಮಾನವ ತೊಂದರೆಗೆ ಓಳಗಾಗುವುದರಲ್ಲೆ ಯಾವುದೆ ಸಂದೇಹವಿಲ್ಲ ಎಂದರು.
ವಿಶ್ವ ಒಝೋನ್ ದಿನಾಚರಣೆಯ ಅಂಗವಾಗಿ ವಿವಿದ ಪಿ ಯು ಹಾಗು ಪದವಿ ಕಾಲೇಜುಗಳಿಗೆ ಪ್ರಬಂದ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು. ಈ ಒಂದು ಸ್ಪರ್ದೆಯಲ್ಲಿ ವಿಜೇತರಾದ ವಿವಿದ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.
ನಂತರ ಬಾಲ ವಿಜ್ಞಾನ ಪತ್ರಿಕೆಯ ಸಂಪದಕರಾದ ಡಾ. ಶೇಖರ್ ಗೌಳೇರ್ ರವರು ಮಾತನಾಡಿ ಒಝೊನ್ ಪದರದ ಹಾನಿಗೆ ಕಾರಣವಾಗುವ ಕಾರಕಗಳನ್ನು ಮತ್ತು ರಂದ್ರದಿಂದಾಗುವ ವಿವಿದ ಹಾನಿಗಳನ್ನು ವಿವರಿಸಿದರು. ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮವನ್ನು ಶ್ರಿ. ಕೋಟೋಜಿರಾವ ರವರು ಸ್ವಾಗತಿಸಿ, ಕು. ವೀಣಾ ವಂದಿಸಿದರು. ವಿದ್ಯಾರ್ಥಿನಿಯರಾದ ಕು. ಸ್ನೇಹ ಹಾಗು ಕು. ಪೂರ್ಣಿಮ ನಿರೂಪಿಸಿದರು.