ಒಂದು ದಿನದ ಲೆಖ್ಖ ಪರಿಶೋದಕರ ಕಾರ್ಯಗಾರದ ಉದ್ಘಾಟನಾ ಸಮಾರಂಭ
“ಬದಲಾಗುತ್ತರುವ ಶಿಕ್ಷಣ ವ್ಯವಸ್ಥೆಯಲ್ಲಿ ತರಗತಿಯಲ್ಲಿ ಏನು ಪಾಠ ಮಾಡುತ್ತಿವೆಯೋ ಅದು ಪ್ರಾಯೋಗಿಕವಾಗಿ ಬಳಕೆಯಾಗುತ್ತಿರುವ ಪ್ರಮಾಣ ತೀರಾ ಕಡಿಮೆಯಾಗುರುವುದು ಇಂದಿನ ವಿದ್ಯಾರ್ಥಿಗಳ ಭವಿಷ್ಯತ್ತಿಗೆ ತುಂಬಾ ನಷ್ಟವಾಗುತ್ತಿದೆ” ಎಂದು ಸಾಗರದ ದಿನೇಶ್ ಜೋಷಿ ಫೌಂಡೇಷನ್ ನ ದಿನೇಶ ಕುಮಾರ್ ಎನ್ ಜೋಷಿ ಯವರು ನಗರದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನನಲ್ಲಿ ನಡೆದ ಒಂದು ದಿನದ ಲೆಖ್ಖ ಪರಿಶೋದಕರ ಕಾರ್ಯಗಾರದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತಾನಾಡಿದರು. ಮುಖ್ಯವಾಗಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತರಗತಿಯ ಪಾಠಗಳು ಮತ್ತು ಅದರ ಪ್ರಾಯೋಗಿಕ ರಬೇತಿಯು ತೀರಾ ಅವಶ್ಯಕವಾಗಿದೆ ಎಂದರು.
ನಂತರ ಮಾತನಾಡಿದ ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಜಿ, ಆರ್ ಜೋಷಿಯವರು ಮಾತಾನಾಡಿ, “ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಇತ್ತಿಚೆಗೆ ಜಾಸ್ತಿಯಾಗುತ್ತಿದ್ದು ಆದರೆ ಪದವಿ ಪಡೆದ ವಿದ್ಯಾರ್ಥಿಗಳು ಜೀವನ ನಿರ್ಮಾಣ ಮಾಡಿದಕೊಳ್ಳವಲ್ಲಿ ವಿಫಲವಾಗುತ್ತಿರುವುದು ವಿಷಾದನೀಯ, ಇದಕ್ಕೆ ಕೌಶಲ್ಯದ ಕೊರತೆ ಮತ್ತು ಪುಸ್ತಕ ದವಿಷಯಗಳಿಗೂ ಪ್ರಾಯೋಗಿಕ ಪರಿಣಿತಿಯಲ್ಲಿನ ಕೊರತೆಯೆ ಕಾರಣ ಎಂದರು.”
ಈ ಒಂದು ಸಮಾರಂಭದಲ್ಲಿ ಪ್ರಾಚಾರ್ಯರಾದ ಡಾ. ವಿನಾಯಕ ಕೆ ಎಸ್ ಉಪಸ್ಥಿತರಿದ್ದು, ಉಪನ್ಯಾಸಕರಾದ ಗಿರೀಶ್ ಸ್ವಾಗತಿಸಿ, ಕು. ಸುಮಯ್ಯ ಮತ್ತು ಕು, ಐಶ್ವರ್ಯ ನಿರೂಪಿಸಿದರು.