Kumadvathi High School,  Shikaripura

Kumadvathi High School

Shikaripura
  08187-224378/222188
  khsmythri@gmail.com
Kumadvathi High School > News and Events

News and Events

ಕನ್ನಡ ರಾಜ್ಯೋತ್ಸವ ಆಚರಣೆ

ನವೆಂಬರ್ 01, 2015 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಕಳಸಾ-ಬಂಡೂರಿ ಸ್ಥಬ್ಧ ಚಿತ್ರವನ್ನು ಪ್ರದರ್ಶಿಸಲಾಯಿತು.

Read More

ವಾಲ್ಮೀಕಿ ಜಯಂತಿ ಆಚರಣೆ

ದಿನಾಂಕ 27-10-2015 ರಂದು ಕುಮದ್ವತಿ ಪ್ರೌಢಶಾಲೆಯಲ್ಲಿ ವಾಲ್ಮೀಕಿ  ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Read More

Gandhi Jayanthi Celebration

ದಿನಾಂಕ 02-10-2015 ರಂದು ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಶ್ರಮಾಧಾನ, ಪ್ರಬಂಧ ರಚನೆ, ಭಾಷಣ, ಗಾಂಧೀಜಿ ಭಾವಚಿತ್ರ ರಚನೆಗಳನ್ನು, ಭಾವಚಿತ್ರ ಸಂಗ್ರಹ, ದೇಶಭಕ್ತಿಗೀತೆ, ನುಡಿಮುತ್ತು ಸಂಗ್ರಹ, ಸಾಮಾಜಿಕ ಉತ್ಪಾದನ ಕಾರ್ಯ ಯೋಜನೆ ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಮೈತ್ರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ಶ್ರೀಯುತ ಗಿರೀಶ್‌ರವರು ಉಪನ್ಯಾಸ ಮಾತುಗಳನ್ನಾಡಿದರು. ಮಹಾನ್ ಚೇತನಗಳಾದಂತಹ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ತತ್ವಗಳು, ಆದರ್ಶತೆ, ಸರಳತೆ ಅವರ ದೇಶ ಸೇವೆಯ ಕೊಡುಗೆಗಳ ಬಗ್ಗೆ ಸವಿ ವಿವರವಾಗಿ ತಿಳಿಸಿದರು. ವಿಶ್ವಸಂಸ್ಥೆಯು ಅಹಿಂಸಾ ದಿನವನ್ನಾಗಿ […]

Read More

ವಿದ್ಯಾಭಾರತಿ ಜಿಲ್ಲಾ ಮಟ್ಟದ ಕ್ರೀಡಾಕೂಟ

ವಿದ್ಯಾಭಾರತಿ ಜಿಲ್ಲಾ ಮಟ್ಟದ ಕ್ರೀಡಾಕೂಟವು ಭದ್ರಾವತಿಯ ಕನಕ ಮಂಟಪದ ಕ್ರೀಡಾಂಗಣದಲ್ಲಿ  ದಿನಾಂಕ: 22/೦8/2015 ಶನಿವಾರದಂದು ನಡೆಯಿತು. ಶಿವಮೊಗ್ಗ  ಜಿಲ್ಲೆ ಮಟ್ಟದ ವಿದ್ಯಾಭಾರತಿಯ ಒಟ್ಟು 18 ಪ್ರೌಢಶಾಲೆಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು,  ಅದರಲ್ಲಿ ಕುಮದ್ವತಿ ಪ್ರೌಢಶಾಲೆಯು ಅತ್ಯುತ್ತಮ ಕ್ರೀಡಾ ಪ್ರದರ್ಶನ ತೋರಿ 17 ಪ್ರಥಮ, 12 ದ್ವಿತೀಯ, 12 ತೃತೀಯ ಬಹುಮಾನಗಳನ್ನುಗಳಿಸಿದೆ.  ಬಾಲಕಿಯರ  ವಿಭಾಗದಲ್ಲಿ  ಕು| ಭೂಮಿಕಾ, ಸುಚಿತ್ರ, ಮಾನಸ, ಚಂದನ, ಪ್ರಿಯಾಂಕ, ಸುಪ್ರಿಯಾ, ಶರಣ್ಯ ಹಾಗೂ ಬಾಲಕರ ವಿಭಾಗದಲ್ಲಿ ಅರುಣ.ಎಸ್.ಎ, ಶಶಾಂಕ.ಬಿ.ಜೆ, ಪುನೀತ್, ಪವನ, ಸೂರಜ್, ರಾಕೇಶ್ […]

Read More

ಜಿಲ್ಲಾ ಜ್ಞಾನ ವಿಜ್ಞಾನ ಮೇಳ

ವಿದ್ಯಾ ಭಾರತಿ ಕರ್ನಾಟಕ ಶಿವಮೊಗ್ಗ ಜಿಲ್ಲೆ ಜಿಲ್ಲಾ ಜ್ಞಾನ ವಿಜ್ಞಾನ ಮೇಳ, ದಿನಾಂಕ: 30-೦8-2015 ಮತ್ತು 31-08-2015 ರಂದು ನಡೆದ ಜಿಲ್ಲಾ ಜ್ಞಾನ ವಿಜ್ಞಾನ ಮೇಳವು ಸೇವಾ ಸಾಗರ ಪ್ರಾಥಮಿಕ ಶಾಲೆ ಸಾಗರದಲ್ಲಿ ನಡೆದಿದ್ದು, ನಮ್ಮ ಶಾಲೆಯ ಮಕ್ಕಳು ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ. ಇವರಿಗೆ ನಮ್ಮ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಾಲೆಯ ಎಲ್ಲಾ ಶಿಕ್ಷಕ ವೃಂದ ಅಭಿನಂದನೆಗಳನ್ನು ತಿಳಿಸಿರುತ್ತದೆ.

Read More

ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮ

ದಿನಾಂಕ: 17/೦7/2015  ರಂದು ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮವನ್ನು  ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ತಾಲ್ಲೂಕಿನ ಶಾಸಕರಾದ ಶ್ರೀಯುತ. ಬಿ.ವೈ.ರಾಘವೇಂದ್ರ ರವರು ಉದ್ಘಾಟಿಸಿದರು. ಸಂಘವು ಶಕ್ತಿಯ ಕ್ರಿಯಾಶೀಲತೆಯ ಸಂಕೇತವಾಗಿದ್ದು ಸಂಘದ ಮುಖಾಂತರ ನಮ್ಮ ಭವಿಷ್ಯವನ್ನು ನಾವೆ ರೂಪಿಸಿಕೊಳ್ಳಬೇಕಾಗುತ್ತದೆ. ಗೆಲುವು ಸಾದಕನ ಸೊತ್ತೆ ಹೊರತು ಸೋಮಾರಿ ಸೊತ್ತಲ್ಲ. ಅತೀ ಚಿಕ್ಕ ವಯಸ್ಸಿನಲ್ಲಿ ಜಗತ್ತಿನ ಅತ್ಯಂತ ಶ್ರೇಷ್ಠ ಕ್ರಿಕೆಟ್ ಆಟಗಾರನಾದ ಸಚಿನ್ ತೆಂಡೂಲ್ಕ್‌ರ್‌ನ ಸಾಧನೆ ಜಗತ್ತೆ ಮೆಚ್ಚುವಂತ್ತಾಗಿದೆ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಜೊತೆಗೆ ಸಾಧನೆ ಕಡೆಗೆ ಹೆಚ್ಚಿನ ಗಮನ ಕೊಡಬೇಕು. […]

Read More

ರಕ್ಷಾ ಬಂಧನ ಕಾರ್ಯಕ್ರಮ

ರಕ್ಷಾ ಬಂಧನ ಕಾರ್ಯಕ್ರಮವನ್ನು ದಿನಾಂಕ: 29/08/2015 ಶನಿವಾರ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಕೃಷ್ಣಪ್ರಸಾದ.ಬಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಮುಖರು, ಇವರು ತಮ್ಮ ಬೌದ್ಧಿಕನಲ್ಲಿ ಪುರಾತನ ಕಾಲದಿಂದಲೂ ರಕ್ಷಾ ಬಂಧನ ಕಾರ್ಯಕ್ರಮವು ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದ್ದು, ದೇಶದ ರಕ್ಷಣೆಯ ಒಗ್ಗಟ್ಟಿಗೆ ಪೂರಕವಾಗಿದೆ. ವಿಶ್ವಕ್ಕೆ ಸಂಸ್ಕೃತಿಯನ್ನು ಹಾಗೂ ಸಂಸ್ಕಾರವನ್ನು ಪ್ರಪ್ರಥಮವಾಗಿ ಪರಿಚಯಿಸಿದಂತಹ ರಾಷ್ಟ್ರ ಭಾರತವಾಗಿದ್ದು, ಭಾರತದ ಸಂಸ್ಕೃತಿಯನ್ನು ಇತರೆ ರಾಷ್ಟ್ರಗಳು ಪಾಲಿಸುತ್ತಿದ್ದು, ಉಡುಗೆ, ಸಂಸ್ಕಾರ ಮತ್ತು ಭಾಷೆಯ ಮಹತ್ವವು  ಇಡಿ ಜಗತ್ತು […]

Read More

ಸ್ವಚ್ಛ ಭಾರತ ಅಭಿಯಾನ ರಸಪ್ರಶ್ನೆಯಲ್ಲಿ ಕುಮಾರಿ ಶರಣ್ಯ ಪ್ರಥಮ

ಶಿಕಾರಿಪುರ ಪಟ್ಟಣದ ಪುರಸಭೆಯಲ್ಲಿ ಸ್ವಚ್ಛ ಭಾರತ ಅಭಿಯಾನದ ಪ್ರಯುಕ್ತ ರಸಪ್ರಶ್ನೆ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪಟ್ಟಣದ ಕುಮದ್ವತಿ ಪ್ರೌಢ ಶಾಲೆಯ ಕು|| ಶರಣ್ಯ  (9ನೇ ತರಗತಿ,ಆ.ಮಾ) ಪ್ರಥಮ ಸ್ಥಾನ ಪಡೆದಿದ್ದಾಳೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕ ಆಡಳಿತ ಮತ್ತು ಸ್ಥಳಿಯ ಸಂಸ್ಥೆಗಳ ಆಶ್ರಯದಲ್ಲಿ ನಡೆದ 69ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತಾಲ್ಲೂಕಿನ ಶಾಸಕರಾದ ಶ್ರೀಯುತ.ಬಿ.ವೈ ರಾಘವೇಂದ್ರರವರು ವಿಜೇತ ವಿದ್ಯಾರ್ಥಿನಿಗೆ ಚೆಕ್ ಮತ್ತು ಟ್ರೋಫಿಯನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ನಗರದ ಮಹಾದೇವಪ್ಪ ತಹಶೀಲ್ದಾರ್ […]

Read More

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ದಿನಾಂಕ: 15/08/2015 ರಂದು  69 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ನಂತರ ಕೆ.ಆರ್.ಸಿ.ಎಸ್ ಏಕಲವ್ಯ ಕ್ರೀಡಾಂಗಣದಲ್ಲಿ ಆಚರಣೆ ಮಾಡಲಾಯಿತು. ಧ್ವಜಾರೋಹಣದ ಅಧ್ಯಕ್ಷತೆಯನ್ನು ಶ್ರೀಯುತ ಬಿ.ವೈ.ರಾಘವೇಂದ್ರ, ಶಾಸಕರು ಹಾಗೂ ಕಾರ್ಯದರ್ಶಿಗಳು, ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ, ಶಿಕಾರಿಪುರ. ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ.ಶಿವಕುಮಾರ,  ಶ್ರೀಮತಿ ತೇಜಸ್ವಿನಿ ರಾಘವೇಂದ್ರ, ನಿರ್ದೇಶಕರು ಹಾಗೂ ಎಲ್ಲಾ ಅಂಗ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದೇತರ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ  ಭಾಷಣ, ಛದ್ಮವೇಷ, ದೇಶಭಕ್ತಿ ಗೀತೆ ಮುಂತಾದ ಮನೋರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

Read More

69 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ – 2015

ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ 69 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕಾರಿಪುರ ಕ್ಷೇತ್ರದ ಶಾಸಕರು ಹಾಗೂ ನಮ್ಮ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಿ. ವೈ ರಾಘವೇಂದ್ರರವರು ದ್ವಜಾರೋಹಣ ನಡೆಸಿ, ದೇಶದ ಮಹಾ ಪುರುಷರನ್ನು ಸ್ಮರಿಸುವ ಮೂಲಕ ದಿನಾಚರಣೆಯನ್ನು ಆಚರಿಸಿ ಎಂದು ಹೇಳಿದರು. ವರ್ಷದಲ್ಲಿ ಒಂದು ದಿನ ದೇಶದ ಎಲ್ಲ ಜನ ಒಂದೇ ಸಮಯದಲ್ಲಿ ಸಂತೋಷದಿಂದ ಆಚರಿಸುವ ಈ ಹಬ್ಬದಲ್ಲಿ ನಾವುಗಳು ದೇಶಕ್ಕೋಸ್ಕರ ಸಂಕಲ್ಪ ಮಾಡಬೇಕಾಗಿದೆ. ಸಂಪದ್ಬರಿತವಾದ ನಮ್ಮ ರಾಷ್ಟ್ರ ಬ್ರಿಟೀಷರ ಆಗಮನದಿಂದ ಸಂಪತ್ತು ಕಳೆದುಕೊಳ್ಳುವಂತಾಯಿತು. ಅನೇಕ […]

Read More