News and Events
ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮ
Date : 21-09-2015
ದಿನಾಂಕ: 17/೦7/2015 ರಂದು ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ತಾಲ್ಲೂಕಿನ ಶಾಸಕರಾದ ಶ್ರೀಯುತ. ಬಿ.ವೈ.ರಾಘವೇಂದ್ರ ರವರು ಉದ್ಘಾಟಿಸಿದರು. ಸಂಘವು ಶಕ್ತಿಯ ಕ್ರಿಯಾಶೀಲತೆಯ ಸಂಕೇತವಾಗಿದ್ದು ಸಂಘದ ಮುಖಾಂತರ ನಮ್ಮ ಭವಿಷ್ಯವನ್ನು ನಾವೆ ರೂಪಿಸಿಕೊಳ್ಳಬೇಕಾಗುತ್ತದೆ. ಗೆಲುವು ಸಾದಕನ ಸೊತ್ತೆ ಹೊರತು ಸೋಮಾರಿ ಸೊತ್ತಲ್ಲ. ಅತೀ ಚಿಕ್ಕ ವಯಸ್ಸಿನಲ್ಲಿ ಜಗತ್ತಿನ ಅತ್ಯಂತ ಶ್ರೇಷ್ಠ ಕ್ರಿಕೆಟ್ ಆಟಗಾರನಾದ ಸಚಿನ್ ತೆಂಡೂಲ್ಕ್‌ರ್‌ನ ಸಾಧನೆ ಜಗತ್ತೆ ಮೆಚ್ಚುವಂತ್ತಾಗಿದೆ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಜೊತೆಗೆ ಸಾಧನೆ ಕಡೆಗೆ ಹೆಚ್ಚಿನ ಗಮನ ಕೊಡಬೇಕು. […]
ರಕ್ಷಾ ಬಂಧನ ಕಾರ್ಯಕ್ರಮ
Date : 21-09-2015
ರಕ್ಷಾ ಬಂಧನ ಕಾರ್ಯಕ್ರಮವನ್ನು ದಿನಾಂಕ: 29/08/2015 ಶನಿವಾರ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಕೃಷ್ಣಪ್ರಸಾದ.ಬಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಮುಖರು, ಇವರು ತಮ್ಮ ಬೌದ್ಧಿಕನಲ್ಲಿ ಪುರಾತನ ಕಾಲದಿಂದಲೂ ರಕ್ಷಾ ಬಂಧನ ಕಾರ್ಯಕ್ರಮವು ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದ್ದು, ದೇಶದ ರಕ್ಷಣೆಯ ಒಗ್ಗಟ್ಟಿಗೆ ಪೂರಕವಾಗಿದೆ. ವಿಶ್ವಕ್ಕೆ ಸಂಸ್ಕೃತಿಯನ್ನು ಹಾಗೂ ಸಂಸ್ಕಾರವನ್ನು ಪ್ರಪ್ರಥಮವಾಗಿ ಪರಿಚಯಿಸಿದಂತಹ ರಾಷ್ಟ್ರ ಭಾರತವಾಗಿದ್ದು, ಭಾರತದ ಸಂಸ್ಕೃತಿಯನ್ನು ಇತರೆ ರಾಷ್ಟ್ರಗಳು ಪಾಲಿಸುತ್ತಿದ್ದು, ಉಡುಗೆ, ಸಂಸ್ಕಾರ ಮತ್ತು ಭಾಷೆಯ ಮಹತ್ವವು ಇಡಿ ಜಗತ್ತು […]
ಸ್ವಚ್ಛ ಭಾರತ ಅಭಿಯಾನ ರಸಪ್ರಶ್ನೆಯಲ್ಲಿ ಕುಮಾರಿ ಶರಣ್ಯ ಪ್ರಥಮ
Date : 21-09-2015
ಶಿಕಾರಿಪುರ ಪಟ್ಟಣದ ಪುರಸಭೆಯಲ್ಲಿ ಸ್ವಚ್ಛ ಭಾರತ ಅಭಿಯಾನದ ಪ್ರಯುಕ್ತ ರಸಪ್ರಶ್ನೆ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪಟ್ಟಣದ ಕುಮದ್ವತಿ ಪ್ರೌಢ ಶಾಲೆಯ ಕು|| ಶರಣ್ಯ (9ನೇ ತರಗತಿ,ಆ.ಮಾ) ಪ್ರಥಮ ಸ್ಥಾನ ಪಡೆದಿದ್ದಾಳೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕ ಆಡಳಿತ ಮತ್ತು ಸ್ಥಳಿಯ ಸಂಸ್ಥೆಗಳ ಆಶ್ರಯದಲ್ಲಿ ನಡೆದ 69ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತಾಲ್ಲೂಕಿನ ಶಾಸಕರಾದ ಶ್ರೀಯುತ.ಬಿ.ವೈ ರಾಘವೇಂದ್ರರವರು ವಿಜೇತ ವಿದ್ಯಾರ್ಥಿನಿಗೆ ಚೆಕ್ ಮತ್ತು ಟ್ರೋಫಿಯನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ನಗರದ ಮಹಾದೇವಪ್ಪ ತಹಶೀಲ್ದಾರ್ […]
ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ
Date : 21-09-2015
ದಿನಾಂಕ: 15/08/2015 ರಂದು 69 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ನಂತರ ಕೆ.ಆರ್.ಸಿ.ಎಸ್ ಏಕಲವ್ಯ ಕ್ರೀಡಾಂಗಣದಲ್ಲಿ ಆಚರಣೆ ಮಾಡಲಾಯಿತು. ಧ್ವಜಾರೋಹಣದ ಅಧ್ಯಕ್ಷತೆಯನ್ನು ಶ್ರೀಯುತ ಬಿ.ವೈ.ರಾಘವೇಂದ್ರ, ಶಾಸಕರು ಹಾಗೂ ಕಾರ್ಯದರ್ಶಿಗಳು, ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ, ಶಿಕಾರಿಪುರ. ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ.ಶಿವಕುಮಾರ, ಶ್ರೀಮತಿ ತೇಜಸ್ವಿನಿ ರಾಘವೇಂದ್ರ, ನಿರ್ದೇಶಕರು ಹಾಗೂ ಎಲ್ಲಾ ಅಂಗ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದೇತರ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಭಾಷಣ, ಛದ್ಮವೇಷ, ದೇಶಭಕ್ತಿ ಗೀತೆ ಮುಂತಾದ ಮನೋರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
69 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ – 2015
Date : 19-08-2015
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ 69 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕಾರಿಪುರ ಕ್ಷೇತ್ರದ ಶಾಸಕರು ಹಾಗೂ ನಮ್ಮ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಿ. ವೈ ರಾಘವೇಂದ್ರರವರು ದ್ವಜಾರೋಹಣ ನಡೆಸಿ, ದೇಶದ ಮಹಾ ಪುರುಷರನ್ನು ಸ್ಮರಿಸುವ ಮೂಲಕ ದಿನಾಚರಣೆಯನ್ನು ಆಚರಿಸಿ ಎಂದು ಹೇಳಿದರು. ವರ್ಷದಲ್ಲಿ ಒಂದು ದಿನ ದೇಶದ ಎಲ್ಲ ಜನ ಒಂದೇ ಸಮಯದಲ್ಲಿ ಸಂತೋಷದಿಂದ ಆಚರಿಸುವ ಈ ಹಬ್ಬದಲ್ಲಿ ನಾವುಗಳು ದೇಶಕ್ಕೋಸ್ಕರ ಸಂಕಲ್ಪ ಮಾಡಬೇಕಾಗಿದೆ. ಸಂಪದ್ಬರಿತವಾದ ನಮ್ಮ ರಾಷ್ಟ್ರ ಬ್ರಿಟೀಷರ ಆಗಮನದಿಂದ ಸಂಪತ್ತು ಕಳೆದುಕೊಳ್ಳುವಂತಾಯಿತು. ಅನೇಕ […]
SSLC 2014-15 Batch Result Sheet
Date : 13-05-2015
Swami Vivekananda Vidya Samsthe(R.) Kumadvathi High School, Shikaripur The Management and Staff Members are heartily Congratulate the students for securing 100% result SSLC Result Sheet <- Click Here to download
Admission open for 2015-16
Date : 11-04-2015
We are pleased to announce the opening of our admission process for the academic year 2015– 2016. Admission Open for the Current Academic Year. Hurry Up, Don’t miss out to apply! Application Form <- Click Here to Download