ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ
ದಿನಾಂಕ: 15/08/2015 ರಂದು 69 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ನಂತರ ಕೆ.ಆರ್.ಸಿ.ಎಸ್ ಏಕಲವ್ಯ ಕ್ರೀಡಾಂಗಣದಲ್ಲಿ ಆಚರಣೆ ಮಾಡಲಾಯಿತು.
ಧ್ವಜಾರೋಹಣದ ಅಧ್ಯಕ್ಷತೆಯನ್ನು ಶ್ರೀಯುತ ಬಿ.ವೈ.ರಾಘವೇಂದ್ರ, ಶಾಸಕರು ಹಾಗೂ ಕಾರ್ಯದರ್ಶಿಗಳು, ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ, ಶಿಕಾರಿಪುರ. ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ.ಶಿವಕುಮಾರ, ಶ್ರೀಮತಿ ತೇಜಸ್ವಿನಿ ರಾಘವೇಂದ್ರ, ನಿರ್ದೇಶಕರು ಹಾಗೂ ಎಲ್ಲಾ ಅಂಗ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದೇತರ ವರ್ಗದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಭಾಷಣ, ಛದ್ಮವೇಷ, ದೇಶಭಕ್ತಿ ಗೀತೆ ಮುಂತಾದ ಮನೋರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.