ಸ್ವಚ್ಛ ಭಾರತ ಅಭಿಯಾನ ರಸಪ್ರಶ್ನೆಯಲ್ಲಿ ಕುಮಾರಿ ಶರಣ್ಯ ಪ್ರಥಮ
ಶಿಕಾರಿಪುರ ಪಟ್ಟಣದ ಪುರಸಭೆಯಲ್ಲಿ ಸ್ವಚ್ಛ ಭಾರತ ಅಭಿಯಾನದ ಪ್ರಯುಕ್ತ ರಸಪ್ರಶ್ನೆ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪಟ್ಟಣದ ಕುಮದ್ವತಿ ಪ್ರೌಢ ಶಾಲೆಯ ಕು|| ಶರಣ್ಯ (9ನೇ ತರಗತಿ,ಆ.ಮಾ) ಪ್ರಥಮ ಸ್ಥಾನ ಪಡೆದಿದ್ದಾಳೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕ ಆಡಳಿತ ಮತ್ತು ಸ್ಥಳಿಯ ಸಂಸ್ಥೆಗಳ ಆಶ್ರಯದಲ್ಲಿ ನಡೆದ 69ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತಾಲ್ಲೂಕಿನ ಶಾಸಕರಾದ ಶ್ರೀಯುತ.ಬಿ.ವೈ ರಾಘವೇಂದ್ರರವರು ವಿಜೇತ ವಿದ್ಯಾರ್ಥಿನಿಗೆ ಚೆಕ್ ಮತ್ತು ಟ್ರೋಫಿಯನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ನಗರದ ಮಹಾದೇವಪ್ಪ ತಹಶೀಲ್ದಾರ್ ಶ್ರೀ ಶಿವಕುಮಾರ್, ಡಿ.ವೈಎಸ್.ಪಿ ಶೃತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿದ್ದಲಿಂಗಪ್ಪನವರು ಉಪಸ್ಥಿತರಿದ್ದರು.
ವಿಜೇತಳಾದ ವಿದ್ಯಾರ್ಥಿನಿಗೆ ಶಾಲಾ ಆಡಳಿತ ಮಂಡಳಿಯವರು, ಆಡಳಿತಾಧಿಕಾರಿಗಳು, ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದರು