ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮ
ದಿನಾಂಕ: 17/೦7/2015 ರಂದು ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ತಾಲ್ಲೂಕಿನ ಶಾಸಕರಾದ ಶ್ರೀಯುತ. ಬಿ.ವೈ.ರಾಘವೇಂದ್ರ ರವರು ಉದ್ಘಾಟಿಸಿದರು.
ಸಂಘವು ಶಕ್ತಿಯ ಕ್ರಿಯಾಶೀಲತೆಯ ಸಂಕೇತವಾಗಿದ್ದು ಸಂಘದ ಮುಖಾಂತರ ನಮ್ಮ ಭವಿಷ್ಯವನ್ನು ನಾವೆ ರೂಪಿಸಿಕೊಳ್ಳಬೇಕಾಗುತ್ತದೆ. ಗೆಲುವು ಸಾದಕನ ಸೊತ್ತೆ ಹೊರತು ಸೋಮಾರಿ ಸೊತ್ತಲ್ಲ. ಅತೀ ಚಿಕ್ಕ ವಯಸ್ಸಿನಲ್ಲಿ ಜಗತ್ತಿನ ಅತ್ಯಂತ ಶ್ರೇಷ್ಠ ಕ್ರಿಕೆಟ್ ಆಟಗಾರನಾದ ಸಚಿನ್ ತೆಂಡೂಲ್ಕ್‌ರ್‌ನ ಸಾಧನೆ ಜಗತ್ತೆ ಮೆಚ್ಚುವಂತ್ತಾಗಿದೆ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಜೊತೆಗೆ ಸಾಧನೆ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ತಮಗೆ ನೀಡಿರುವ ವಿವಿಧ ಖಾತೆಗಳ ಪೂರ್ಣ ಮಾಹಿತಿ ಪಡೆದು ಖಾತೆ ನಿರ್ವಹಣೆ ಮಾಡಬೇಕು. ಕನಿಷ್ಠ ಮಾಸಿಕ ಎರಡು ಕಾರ್ಯಕ್ರಮಗಳಾದರು ಆಯೋಜಿಸಿ ಖಾತೆಯ ಪೂರ್ಣ ಜವಬ್ದಾರಿ ನಿರ್ವಹಿಸಲು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅತಿಥಿಗಳಾದ ಶ್ರೀಯುತ. ಲಿಂಗರಾಜು, ಪ್ರಾಂಶುಪಾಲರು. ಕುಮದ್ವತಿ ವಸತಿಯುಕ್ತ ಕೇಂದ್ರಿಯ ವಿದ್ಯಾಲಯ, ಶಿಕಾರಿಪುರ ತಮ್ಮ ಅತಿಥಿ ನುಡಿಗಳನ್ನಾಡಿ, ನೆಲ್ಸನ್ ಮಂಡೇಲಾ ಮದರ್ ತೆರೆಸಾ ಹಾಗೂ ಎಂ.ಎಸ್ ದೋನಿಯವರು ಹಾಗೂ ಪ್ರಮುಖ ನಾಯಕರ ಬಗ್ಗೆ ತಿಳಿಸುತ್ತ ಪ್ರತಿಸಾಧನೆಗೆ ಮುಖ್ಯವಾಗಿ ನಾಯಕತ್ವ ಗುಣಬೇಕು ಅಂತಹ ಗುಣ ಶಾಲಾಹಂತದಲ್ಲಿ ದೊರೆಯುತ್ತದೆ ಅದನ್ನು ಸಮರ್ಪಕವಾಗಿ ಬಳಸಿಕೊಂಡು ಮುನ್ನೆಡೆದರೆ ಸಾಧನೆ ಸುಲಭವಾಗುತ್ತದೆ ಎಂದು ತಮ್ಮ ಅತಿಥಿ ನುಡಿಗಳಾನ್ನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿಯಾದ ಶ್ರೀಮತಿ ತೇಜಸ್ವಿನಿ ರಾಘವೇಂದ್ರರವರು ಉಪಸ್ಥಿತರಿದ್ದರು.
ಶ್ರೀಯುತ ದಯಾನಂದ.ಕೆ.ಆರ್ ಆಡಳಿತಾಧಿಕಾರಿಗಳು ಪ್ರಾಸ್ಥಾವಿಕ ನುಡಿಗಳಾನ್ನಾಡಿದರು. ಸ್ವಾಗತ ಶ್ರೀಯುತ ವಿಶ್ವನಾಥ್.ಪಿ ಮುಖ್ಯೋಪಾಧ್ಯಾಯರು ಹಾಗೂ ಪ್ರಮಾಣ ವಚನಬೋದನೆ ಶ್ರೀಯುತ ರಾಜನಗೌಡ ಪಾಟೀಲ್ ವಂದನಾರ್ಪಣೆ ಶ್ರೀಯುತ ನಿಂಗಪ್ಪ.ಡಿ. ಸಹ ಶಿಕ್ಷಕರು, ನಿರೂಪಣೆ ಭೂಮಿಕಾ.ಆರ್.ರಾವ್ ೧೦ನೇ ತರಗತಿ ಇವರು ನೆರವೇರಿಸಿದರು.