ವಿದ್ಯಾಭಾರತಿ ಜಿಲ್ಲಾ ಮಟ್ಟದ ಕ್ರೀಡಾಕೂಟ
ವಿದ್ಯಾಭಾರತಿ ಜಿಲ್ಲಾ ಮಟ್ಟದ ಕ್ರೀಡಾಕೂಟವು ಭದ್ರಾವತಿಯ ಕನಕ ಮಂಟಪದ ಕ್ರೀಡಾಂಗಣದಲ್ಲಿ ದಿನಾಂಕ: 22/೦8/2015 ಶನಿವಾರದಂದು ನಡೆಯಿತು. ಶಿವಮೊಗ್ಗ ಜಿಲ್ಲೆ ಮಟ್ಟದ ವಿದ್ಯಾಭಾರತಿಯ ಒಟ್ಟು 18 ಪ್ರೌಢಶಾಲೆಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಅದರಲ್ಲಿ ಕುಮದ್ವತಿ ಪ್ರೌಢಶಾಲೆಯು ಅತ್ಯುತ್ತಮ ಕ್ರೀಡಾ ಪ್ರದರ್ಶನ ತೋರಿ 17 ಪ್ರಥಮ, 12 ದ್ವಿತೀಯ, 12 ತೃತೀಯ ಬಹುಮಾನಗಳನ್ನುಗಳಿಸಿದೆ. ಬಾಲಕಿಯರ ವಿಭಾಗದಲ್ಲಿ ಕು| ಭೂಮಿಕಾ, ಸುಚಿತ್ರ, ಮಾನಸ, ಚಂದನ, ಪ್ರಿಯಾಂಕ, ಸುಪ್ರಿಯಾ, ಶರಣ್ಯ ಹಾಗೂ ಬಾಲಕರ ವಿಭಾಗದಲ್ಲಿ ಅರುಣ.ಎಸ್.ಎ, ಶಶಾಂಕ.ಬಿ.ಜೆ, ಪುನೀತ್, ಪವನ, ಸೂರಜ್, ರಾಕೇಶ್ ಮತ್ತು ತೇಜಸ್ ಇವರು ಪ್ರಾಂತೀಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಇವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದನೆಗಳನ್ನು ತಿಳಿಸಿರುತ್ತಾರೆ.