Gandhi Jayanthi Celebration
ದಿನಾಂಕ 02-10-2015 ರಂದು ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಶ್ರಮಾಧಾನ, ಪ್ರಬಂಧ ರಚನೆ, ಭಾಷಣ, ಗಾಂಧೀಜಿ ಭಾವಚಿತ್ರ ರಚನೆಗಳನ್ನು, ಭಾವಚಿತ್ರ ಸಂಗ್ರಹ, ದೇಶಭಕ್ತಿಗೀತೆ, ನುಡಿಮುತ್ತು ಸಂಗ್ರಹ, ಸಾಮಾಜಿಕ ಉತ್ಪಾದನ ಕಾರ್ಯ ಯೋಜನೆ ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಮೈತ್ರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ಶ್ರೀಯುತ ಗಿರೀಶ್‌ರವರು ಉಪನ್ಯಾಸ ಮಾತುಗಳನ್ನಾಡಿದರು. ಮಹಾನ್ ಚೇತನಗಳಾದಂತಹ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ತತ್ವಗಳು, ಆದರ್ಶತೆ, ಸರಳತೆ ಅವರ ದೇಶ ಸೇವೆಯ ಕೊಡುಗೆಗಳ ಬಗ್ಗೆ ಸವಿ ವಿವರವಾಗಿ ತಿಳಿಸಿದರು. ವಿಶ್ವಸಂಸ್ಥೆಯು ಅಹಿಂಸಾ ದಿನವನ್ನಾಗಿ ಅಕ್ಟೋಬರ್-02 ರಂದು ಆಚರಿಸಲು ನಿರ್ಧರಿಸಿದ್ದು, ಬ್ರಿಟಿಷ್‌ರ ವಿರುದ್ದ ದಂಗೆಯದ್ದು ಹಿಂಸೆಯು ಬದಲಾಗಿ ಅಹಿಂಸೆಯ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿ ಮಹಾತ್ಮ ಗಾಂಧೀಜಿ. ಅಂತಹ ಮಹಾನ್ ಚೇತನ್ ವ್ಯಕ್ತಿಯ ಜನ್ಮ ದಿನವನ್ನು ಆಚರಿಸುತ್ತಿದ್ದೇವೆ ಮತ್ತು ಗಾಂಧೀಜಿಯವರ ಸತ್ಯಾಗ್ರಹ ಹೋರಾಟದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಮದ್ವತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದಂತಹ ಶ್ರೀಯುತ ವಿಶ್ವನಾಥ.ಪಿ ರವರು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ 112ರ ಜನ್ಮದಿನ ಆಚರಿಸುತ್ತೇದ್ದೇವೆ. ವ್ಯಯಕ್ತಿಕ ಸ್ವಾರ್ಥದ ಬದಲಾಗಿ ದೇಶದ ಸೇವೆಗೆ ತಮ್ಮ ಇಡೀ ಜೀವನ ಸಾಗಿಸಿದ ಮಹಾನ್ ವ್ಯಕ್ತಿ ಶಾಸ್ತ್ರೀಜಿಯವರು ಯಾವುದೇ ಅಡಂಬರದ ಜೀವನ ನಡೆಸದೆ ಸರಳ ಜೀವಿಯಾಗಿ ಜೀವನ ಪೂರೈಸಿದ ಮಹಾನ್ ವ್ಯಕ್ತಿಯ ಬಗ್ಗೆ ತಮ್ಮ ಅಧ್ಯಕ್ಷೀಯ ನುಡಿಗಳಾನ್ನಾಡಿದರು.
ಕಾರ್ಯಕ್ರಮದಲ್ಲಿ ಅವಳಿ ಶಾಲೆಗಳ ಎಲ್ಲಾ ಶಿಕ್ಷಕರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವೇದಿಕೆಯ ಗಣ್ಯರನ್ನು ಕು|ಕೃತಿಕಾ 10ನೇ ತರಗತಿ(ಆ.ಮಾ), ಸ್ವಾಗತಿಸಿ, ಕು| ಸುಚಿತ್ರ 10ನೇ ತರಗತಿ, (ಆ.ಮಾ) ವಂದಿಸಿದರು. ಕು|ಸ್ಪೂರ್ತಿ.ಬಿ. 10ನೇ ತರಗತಿ(ಆ.ಮಾ), ನಿರೂಪಿಸಿದರು.