Kumadvathi High School,  Shikaripura

Kumadvathi High School

Shikaripura
  08187-224378/222188
  khsmythri@gmail.com
Kumadvathi High School > News and Events > ಶಾರದಾ ಪೂಜೆ ಮತ್ತು ವಾರ್ಷಿಕ ವಸ್ತು ಪ್ರದರ್ಶನ ಕಾರ್ಯಕ್ರಮ

ಶಾರದಾ ಪೂಜೆ ಮತ್ತು ವಾರ್ಷಿಕ ವಸ್ತು ಪ್ರದರ್ಶನ ಕಾರ್ಯಕ್ರಮ

Sharada Pooja Sharada Pooja1

ಡಿಸೆಂಬರ್ – 18, 2015 ಪಟ್ಟಣದ ಭವಾನಿರಾವ್ ಕೇರಿಯ ಮೈತ್ರಿ ಹಾಗೂ ಕುಮದ್ವತಿ ಪ್ರೌಢಶಾಲೆಗಳ ಶಾರದಾ ಪೂಜೆ ಮತ್ತು ವಾರ್ಷಿಕ ವಸ್ತು ಪ್ರದರ್ಶನವನ್ನು ಕಾರ್ಯಕ್ರಮದ ಅಥಿತಿಗಳು ಹಾಗೂ ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ. ಶ್ರೀಮತಿ. ವನಮಾಲ.ಕೆ.ಆರ್ ಉದ್ಘಾಟಿಸಿದರು.
ಕೃಷಿ ದೇಶದ ಬೆನ್ನೆಲಬು, ಶಿಕ್ಷಣದ ಉದ್ದೇಶ ಬೌದ್ಧಿಕ ಬೆಳವಣಿಗೆಗಾಗಿ ಹಾಗೂ ಹೊಸ ಹೊಸ ಆವಿಷ್ಕಾರಗಳ ಬದಲಾವಣೆಗಾಗಿ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಅನೇಕ ರೋಗಗಳು ಹರಡುತ್ತಿದ್ದು,ಮನೆಯಲ್ಲಿ ಬಳಸುವ ಪ್ರತಿಯೊಂದು ಪ್ಲಾಸ್ಟಿಕ್ ವಸ್ತುಗಳ ಬಳಕೆಯ ಹಿಂದೆ ಅನೇಕ ದುಷ್ಪಾರಿಣಾಮಗಳು ಉದಾ:ಕ್ಯಾನ್ಸರ್‌ನಂತಹ ರೋಗಗಳು ಹರಡುತ್ತವೆ. ಹಾಗೇಯೆ ಸೌರ ಶಕ್ತಿ ಬಳಕೆಯಲ್ಲಿ ಗುಜರಾತ ರಾಷ್ಟ್ರದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಕರ್ನಾಟಕವು ಅದನ್ನು ಹಿಂಬಾಲಿಸುತ್ತಿದೆ. ಏಳು ವರ್ಷಗಳಲ್ಲಿ ಈಗ ಬಳಸುವ ಸೌರಶಕ್ತಿಯನ್ನು 5 ಪಟ್ಟು ಹೆಚ್ಚಿಸಬೇಕೆಂದು ಪ್ಯಾರಿಸ್ ಶೃಂಗ ಸಭೆಯಲ್ಲಿ ಒಪ್ಪಂದವಾಗಿದೆ. ದ್ವಿದಳ ದಾನ್ಯಗಳಿಂದ ಸಿಗುವ ಸಾರಜನಕ ಮಣ್ಣಿನ ಫಲವತ್ತೆತೆಯನ್ನು ಹೆಚ್ಚಿಸುವುದು.
ಹಾಗೆಯೇ ವಿದ್ಯಾರ್ಥಿಗಳಿಗೆ ನೀರಿನ ಬಳಕೆ ಬಗ್ಗೆ ಹೇಳುತ್ತಾ ನೆರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಸಂಪದ್ಭರಿತ ಜಲಭರಿತ ನಾಡಗಿದ್ದು ಮಿತವ್ಯಯ ಬಳಕೆಯ ಅವಶ್ಯಕತೆಯು ಮನೆ ಮತ್ತು ಶಾಲೆಗಳಲ್ಲಿ ಹೆಚ್ಚು ಗಮನ ಹರಿಸಬೇಕೆಂದು ತಿಳಿಸುತ್ತಾ ವಿದ್ಯಾರ್ಥಿ ಜೀವನದ ಸಾಧನೆಯ ಬಗ್ಗೆ ಹೇಳುತ್ತಾ ಬರ್ನಾಡ ರವರು ಹೇಳಿದ ಸಾಧನೆಯ ಮಾತನ್ನು ತಿಳಿಸುತ್ತಾ “ಮೊದಲಿಗರಾಗುವುದು ಮುಖ್ಯವಲ್ಲ, ಗೆಲ್ಲುವುದು ಮುಖ್ಯವಲ್ಲ, ಸೋಲಿಗೆ ಯಾರು ಹೆದರುವುದಿಲ್ಲವೋ ಅವರೇ ಮೊದಲಿಗರು” ಎಂದು ತಮ್ಮ ಅಥಿತಿ ನುಡಿಗಳಾನ್ನಾಡಿದರು.
ಕಾರ್ಯಕ್ರಮದ ಇನೋರ್ವ ಉದ್ಘಾಟಕರು ಹಾಗೂ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ತೇಜಸ್ವಿನಿ ರಾಘವೇಂದ್ರರವರು ಮಾತಾನಾಡಿ ವಸ್ತು ಪ್ರದರ್ಶನ ಪ್ರತಿ ವಿದ್ಯಾರ್ಥಿಯ ಸೃಜನ ಶೀಲ ಕೌಶಲ್ಯವನ್ನು ಅನಾವರಣಗೊಳಿಸುವಂತಹ ವೇದಿಕೆಯಾಗಿದ್ದು ಕುಮಾರಿ ದಿಶಾ ಕರಿಗಾರ ಇನ್‌ಸ್ಪೈರ್ ಅವಾರ್ಡನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಪ್ರದರ್ಶನ ಮಾಡಿರುವುದು ಸಂಸ್ಥೆಗೆ ಹಾಗೂ ತಾಲ್ಲೂಕಿಗೆ ಹೆಮ್ಮೆ ತಂದಿದೆ. ಇಂತಹ ವೈಜ್ಞಾನಿಕ ಮನೋಭಾವನೆ ಹೊಂದಿರುವ ಪ್ರತಿ ವಿದ್ಯಾರ್ಥಿಯು ಭವ್ಯ ಭಾರತದ ಯುವ ವಿಜ್ಞಾನಿಗಳಾಗಿ ಹೊರಹೊಮ್ಮಲಿ ಎಂದು ತಮ್ಮ ನುಡಿಗಳನ್ನಾಡಿದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಕುಬೇರಪ್ಪ.ಕೆ. ಆಡಳಿತ ಸಮನ್ವಯಾಧಿಕಾರಿಗಳು.ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ, ಶಿಕಾರಿಪುರ. ಮಾತಾನಾಡಿ ಮೈತ್ರಿ ಶಾಲೆಯ ವಿದ್ಯಾರ್ಥಿಗಳು ಸದಾ ಚಟುವಟಿಕೆಯಿಂದ ಕೂಡಿದ್ದು ಶೈಕ್ಷಣಿಕವಾಗಿ ಪ್ರತಿ ಹಂತದಲ್ಲೂ ಪ್ರಗತಿಗೈಯುತ್ತಿರುವುದು ಸಂಸ್ಥೆಯ ಕಾರ್ಯದರ್ಶಿಗಳಿಗೆ ಸಂತೋಷ ತಂದಿದೆ.  ಇಂತಹ ಚಟುವಟಿಕೆಗಳು ನಿರಂತರವಾಗಿ ಸಾಗಲಿ ಎಂದು ಹಾರೈಸಿ ತಮ್ಮ ಅಥಿತಿನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಅವಳಿ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ಶ್ರೀಯುತ ದಯಾನಂದ.ಕೆ.ಆರ್. ಮುಖ್ಯೋಪಾಧ್ಯಾಯರಾದ ಶ್ರೀಯುತ.ವಿಶ್ವನಾಥ.ಪಿ ಹಾಗೂ ಮೈತ್ರಿ ಶಾಲೆಯ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಪಾರ್ವತಿ ಹಾಗೂ ಮೈತ್ರಿ ಮಾತೃಮಂದಿರದ ಮಾತೆಯರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.