ಶಾಲಾ ವಾರ್ಷಿಕ ಕ್ರೀಡಾಕೂಟ 2015-16
ದಿನಾಂಕ:02/12/2015 ಪಟ್ಟಣದ ಭವಾನಿರಾವ್ ಕೇರಿಯ ಮೈತ್ರಿ ಹಾಗೂ ಕುಮದ್ವತಿ ಪ್ರೌಢಶಾಲೆಗಳ ವಾರ್ಷಿಕ ಕ್ರೀಡಾಕೂಟವನ್ನು ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ತಾಲ್ಲೂಕಿನ ಶಾಸಕರಾದ ಶ್ರೀಯುತ ಬಿ.ವೈ.ರಾಘವೇಂದ್ರರವರು ಕ್ರೀಡಾ ಧ್ವಜಾರೋಹಣ ನೆರವೇರೆಸಿ ಉದ್ಘಾಟಿಸಿದರು.
ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಎಂತಹ ಸಾಧನೆಯನ್ನು ಮಾಡಲು ಸಾಧ್ಯ. ಪ್ರತಿನಿತ್ಯ ಕ್ರೀಡೆ, ಯೋಗಗಳಲ್ಲಿ ನಾವು ಪಾಲ್ಗೊಂಡರೆ ಸದೃಢ ದೇಹದ ಜೊತೆ ಸದೃಢ ಮನಸ್ಸನ್ನು ಹೊಂದಲು ಸಾಧ್ಯ. ಹಾಗೂ “ಅಂತರಾಷ್ಟ್ರೀಯ ಯೋಗದಿನ” ಆಚರಣೆಯು ಭಾರತವು ಇಡೀ ಪ್ರಪಂಚಕ್ಕೆ ನೀಡಿದ ಅದ್ಬುತ ಕೊಡುಗೆಯಾಗಿದೆ ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಯುತ ಸಿದ್ದಲಿಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಾತನಾಡಿ ವಾರ್ಷಿಕ ಕ್ರೀಡಾಕೂಟವು ಸಂಪ್ರದಾಯಕ ಕಾರ್ಯಕ್ರಮವಾಗಿದ್ದು, ಸದೃಢವಾದ ದೇಹಕ್ಕೆ ಜ್ಞಾನದ ರಸ ತಂದುಕೊಡುವಂತಹುದು ಹಾಗು ಮೈತ್ರಿ ಶಾಲೆಯು ಪ್ರತಿ ವರ್ಷ ಇನ್‌ಸ್ಪೈರ್ ಅವಾರ್ಡ್‌ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗುತ್ತಿರುವುದು ತಾಲ್ಲೂಕಿನ ಶಿಕ್ಷಣ ಕ್ಷೇತ್ರಕ್ಕೆ ತುಂಬಾ ಕೀರ್ತಿ ತಂದಿದೆ. ಶೈಕ್ಷಣಿಕ ವರ್ಷದಲ್ಲಿ ಕು|| ದಿಶಾ ಕರಿಗಾರ್ 7ನೇ ತರಗತಿ ರಾಷ್ಟ್ರ ಮಟ್ಟ ದೆಹಲಿಗೆ ಆಯ್ಕೆ ಆಗಿರುವುದು ಶಾಲೆಗೆ ಮತ್ತು ತಾಲ್ಲೂಕಿಗೆ ಹೆಮ್ಮೆ ತಂದಿದೆ ಎಂದರು.
ಕಾರ್ಯಕ್ರಮದ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದ ಶ್ರೀಯುತ ಮೋಹನ್.ಟಿ.ಎಸ್ ಪುರಸಭಾ ಸದಸ್ಯರು, ಶಿಕಾರಿಪುರ ಇವರು ಮಾತನಾಡಿ ವಿದ್ಯಾರ್ಥಿಗಳ ಗಮನ ಕೇವಲ ಹೆಚ್ಚು ಅಂಕ ಗಳಿಕೆಯ ಕಡೆ ಇರುವ ಜೊತೆಗೆ ಕ್ರೀಡೆಗೂ ಹೆಚ್ಚಿನ ಮಹತ್ವ ನೀಡಬೇಕು. ಸದೃಢ ದೇಹ ಶುಭ್ರವಾದ ಮನಸ್ಸು ಇದ್ದರೆ ಸಾಕು ಮನುಷ್ಯನ ಸಾಧನೆಗೆ ಎಂದು ತಮ್ಮ ಅತಿಥಿ ನುಡಿಗಳನ್ನಾಡಿದರು.
ಹಾಗೆಯೇ ಇನ್ನೊರ್ವ ಅತಿಥಿಯಾದ ಮಾಜಿ ಪುರಸಭೆ ಸದಸ್ಯರಾದ ಕಬಾಡಿ ರಾಜಣ್ಣ ಮಾತನಾಡಿ ಕ್ರೀಡೆಯಿಂದ ಜ್ಞಾನ, ಜ್ಞಾನದಿಂದ ಸಾಧನೆ, ಸಾಧನೆಯಿಂದ ವ್ಯಕ್ತಿತ್ವ ವಿಕಸನವೆಂದು ತಿಳಿಸಿದರು.
ಕಾರ್ಯಕ್ರಮದ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀಯುತ ದಯಾನಂದ.ಕೆ.ಆರ್. ಹಾಗೂ ಆಡಳಿತ ಸಮನ್ವಯಾಧಿಕಾರಿಗಳಾದ ಶ್ರೀಯುತ ಕುಬೇರಪ್ಪ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.