Kumadvathi High School,  Shikaripura

Kumadvathi High School

Shikaripura
  08187-224378/222188
  khsmythri@gmail.com
Kumadvathi High School > News and Events > ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಶಿಪ್ – 2017

ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಶಿಪ್ – 2017

Quiz Comptetion

‘ದಿ ಪ್ರಿಂಟರ್‍ಸ್(ಮೈಸೂರ್) ಪ್ರೈ.ಲಿ.’ ಸಂಸ್ಥೆಯು ಆಯೋಜಿಸಿದ ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಶಿಪ್ 2017 ಕರ್ನಾಟಕ ಶಾಲಾ ಮಕ್ಕಳ ರಸಪ್ರಶ್ನೆ ಸ್ಪರ್ಧೆಯನ್ನು ಶಿವಮೊಗ್ಗ ಕುವೆಂಪು ರಂಗಮಂದಿರದಲಿ ಜನವರಿ 17 ರಂದು ನಡೆಯಿತು.
ಕಾರ್ಯಕ್ರಮದ ಆಯೋಜಕರು ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಶಿಪ್ 2017ರ ಉದ್ಘಾಟನೆಯನ್ನು ಕೂಡ ನೆರೆದ ಸಮೂಹಕ್ಕೆ ರಸಪ್ರಶ್ನೆಯನ್ನು ಕೇಳಿ ಸರಿಯಾದ ಉತ್ತರವಿತ್ತ ವಿದ್ಯಾರ್ಥಿಗಳಿಂದ ನಡೆಸಿದರು.  ಈ ಉದ್ಘಾಟನೆಯ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ದಿಶಾ ಕಾರಿಗಾರ್ ಆಯ್ಕೆಯಾಗಿ ಉದ್ಘಾಟನೆಯಲ್ಲಿ ಭಾಗವಹಿಸಿದಳು.
ನಂತರದಲ್ಲಿ ಬಂದ ಎಲ್ಲಾ ತಂಡಗಳ ಸ್ಪರ್ಧಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಯಿತು. ಶಿವಮೊಗ್ಗ ಮತ್ತು ಚಿಕ್ಕಮಂಗಳರೂ ಜಿಲ್ಲೆಯಿಂದ 8,9,10ನೇ ತರಗತಿಯ ಸುಮಾರು 286 ವಿದ್ಯಾರ್ಥಿಗಳು ಭಾಗವಹಿಸಿದ್ದು, ಭಾಗವಹಿಸಿದ ವಿದ್ಯಾರ್ಥಿಗಳಿಗೆ 20 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಿ 6 ತಂಡಗಳನ್ನು ಆಯ್ಕೆ ಮಾಡಿದರು. ಅದರಲ್ಲಿ ನಮ್ಮ ಶಾಲೆಯ ಶರಣ್ಯ.ಆರ್ ಮತ್ತು ಮೋಹಿತ್.ಎ.ಆರ್. ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾದರು ನಂತರ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ 5ನೇ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.