ಶಾರದಾ ಪೂಜಾ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಲ್ಕೊಡುಗೆ ಕಾರ್ಯಕ್ರಮ
ಶಿಕ್ಷಣ ಸಂಸ್ಥೆಗಳಿಗೆ ಕಟ್ಟಡಗಳು ಆಸ್ಥಿಯಾಗದೇ ಕಲಿತ ವಿದ್ಯಾರ್ಥಿಗಳ ಸಧನೆ ಆಸ್ಥಿಯಾಗಬೇಕು ಎಂದು ಶಾಸಕ ಬಿ. ವೈ ರಾಘವೇಂದ್ರ ಹೇಳಿದರು. ಕುಮದ್ವತಿ ವಿಜ್ಞಾನ ಹಾಗೂ ವಾಣೀಜ್ಯ ಪದವಿ ಪೂರ್ವಕಾಲೇಜಿನಲ್ಲಿ ನಡೆದ ಶಾರದಾ ಪೂಜಾ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಲ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ವ್ಯವಹಾರಿಕವಾಗಿ ಶಿಕ್ಷಣವನ್ನು ಬಳಸದೆ ಸಮಾಜ, ನೆಲ, ಭಾಷೆ, ದೇಶದ ಹಿತದೃಷ್ಠಿಯಿಂದ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಮಾನವೀಯ ಮೌಲ್ಯ ದೇಶಾಭಿಮಾನವನ್ನು ಬೆಳಸುವಂತ ಗುಣಾತ್ಮಕ ಶಿಕ್ಷಣವನ್ನು ನೀಡುವುದರ ಕಡೆಗೆ ಗಮನ ಹರಿಸಬೇಕು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಲಯಗಳಲ್ಲಿ ಮನುಷ್ಯ ಪ್ರಾಣಿಗಿಂತ ಹೆಚ್ಚಾಗಿ ವರ್ತಿಸುವುದು ಕಂಡುಬರುತಿದೆ ಇದಕ್ಕೆ ಕಾರಣ ಆತನಲ್ಲಿ ಸಂಸ್ಕಾರ ಇಲ್ಲದಿರುವುದು. ಇಂತಹ ಋಣಾತ್ಮಕ ಗುಣಗಳನಗಳನ್ನು ಪೋಷಕರು, ಶಿಕ್ಷಕರು ಹಾಗೂ ಶೈಕ್ಷಣಿಕ ಸಂಸ್ಥೆಗಳು ಗರುತಿಸಿ ತಿದ್ದು ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದು ಹಣ ವನ್ನು ವೆಚ್ಚಮಾಡುತ್ತದೆ ಇದನ್ನು ಸರಿಯದ ರೀತಿಯಲ್ಲಿ ಬಳಸಿಕೊಳ್ಳಬೇಕು. ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ವಿದ್ಯಾರ್ಥಿUಳಿಗೆ ಈ ವರ್ಷ ಪರಿಕ್ಷೆ ಬೇಗ ಪ್ರಾರಂಭವಾಗುತ್ತಿದ್ದು ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಅಭ್ಯಾಸ ಹಾಗೂ ಕಠಿಣ ಪರಿಶ್ರಮ ಮಾಡಿದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ತೇಜಸ್ವಿನಿ ರಾಘವೇಂದ್ರ, ಶೈಕ್ಷಣಿಕ ಮಾರ್ಗದರ್ಶಕ ಫ್ರೋ. ಎಸ್ ಎಸ್ ಗದಗ್, ಪ್ರಾಚಾರ್ಯ ಡಾ. ವೀರೇಂದ್ರ, ಲಿಂಗರಾಜು, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಆಶಾಲತ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕುಮಾರಿ ಸೀಮಾ ಸ್ವಾಗತಿಸಿ, ಗಾನಶ್ರೀ ವಂದಿಸಿ ಶರಣ್ಯ ನಿರೂಪಿಸಿದರು.