ದೀಕ್ಷಾ ದಿವಸ್ ಕಾರ್ಯಕ್ರಮ
“ತುಕ್ಕು ಹಿಡಿಯುವುದಕ್ಕಿಂತ ಸವೆಯುವುದು ಲೇಸು” ಎಂಬ ಮಾತಿಗೆ ತಕ್ಕಂತೆ ತನ್ನ ಜೀವನ ನಡೆಸಿದ ಸಹೋದರಿ ನಿವೇದಿತಾ ರ ನಿಸ್ವಾರ್ಥ ಸೇವಾ ಮನೋಭಾವನೆಯನ್ನು ಭಾವೀ ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು
ಎಂದು ದಿನಾಂಕ: 25.03.2017 ರ ಶನಿವಾರ ಬೆಳಗ್ಗೆ 10.00 ಘಂಟೆಗೆ ಸರಿಯಾಗಿ ಮೈತ್ರಿ ಶಿಕ್ಷಣ ಸಮೂಹ ಮತ್ತು ಸಹೋದರಿ ನಿವೇದಿತ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಸಹೋದರಿ ನಿವೇದಿತಾ ಸ್ವಾಮಿ ವಿವೇಕಾನಂದ ರವರಿಂದ ದೀಕ್ಷೆ ಪಡೆದ ದಿನದ ನೆನಪಿಗಾಗಿ “ದೀಕ್ಷಾ ದಿವಸ್” ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ. ರುಕ್ಮಿಣಿ ನಾಯಕ್, ನಿವೃತ್ತ ಶಿಕ್ಷಕರು, ಸಹೋದರಿ ನಿವೃತ್ತ ಪ್ರತಿಷ್ಠಾನ ರವರು ತಮ್ಮ ಉಪನ್ಯಾಸದಲ್ಲಿ ನುಡಿದರು.
ಶ್ರೀಮತಿಯವರು ಮುಂದುವರೆಯುತ್ತಾ, ಮಾರ್ಗರೆಟ್ ಎಲಿಜೆಬತ್ ನೋಬಲ್ ರವರು ಸಹೋದರಿ ನಿವೇದಿತಾರಾಗಿ ಪರಿವರ್ತನೆಗೊಂಡ ಬಗೆಯನ್ನು ಸವಿವರವಾಗಿ ವಿವರಿಸಿದರು. ಜೊತೆಗೆ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳಿಂದ ಪ್ರೇರಿತರಾಗಿ ಭಾರತಕ್ಕೆ ಬಂದು ನೆಲೆಸಿ ಭಾರತೀಯ ಮಹಿಳೆಯರ ಏಳಿಗೆಗಾಗಿ ಕೈಗೊಂಡ ಅನೇಕ ಸೇವಾ ಕಾರ್ಯಕ್ರಮಗಳು ಮತ್ತು ಸ್ವಾತಂತ್ರ್ಯ ಮತ್ತು ಸ್ವದೇಶೀ ಚಳುವಳಿಯಲ್ಲಿ ಹೇಗೆ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಜೀವನವನ್ನು ಭಾರತಾಂಬೆಯ ಸೇವೆಗಾಗಿ ಮುಡಿಪಾಗಿಟ್ಟರು ಎಂಬುದನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಂಶುಪಾಲೆ ಡಾ. ಶಾಲಿನಿ. ಜೆ ರವರು ಸೋದರಿ ನಿವೇದಿತಾರ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡುವುದರ ಜೊತೆಗೆ ಅವರ ವಿಚಾರಧಾರೆಗಳನ್ನು ತಿಳಿದು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.