71 ನೇ ಸ್ವಾತಂತ್ರ್ಯದಿನಾಚರಣೆ ಕಾರ್ಯಕ್ರಮ
ಒಕ್ಕೂಟ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಅಭಿವೃದ್ಧಿಗೆ ಪೂರಕವಾಗಬೇಕೆ ಹೊರತು ಒಗ್ಗಟ್ಟನ್ನು ಒಡೆಯಲ್ಲಿಕ್ಕಲ್ಲ.ಎಂದು ಶ್ರೀಮತಿ ಪದ್ಮಾವತಿ ಟ್ರಸ್ಟೀ, ಸತ್ವರೂಪ ಪೌಂಡೇಶನ್, ಹುಬ್ಬಳ್ಳಿ ಇವರು ಮೈತ್ರಿ ಕಾಲೇಜಿನದಲ್ಲಿ ಹಮ್ಮಿಕೊಳ್ಳಲಾಗಿದ್ದ 71 ನೇ ಸ್ವತಂತ್ರ್ಯೋತ್ಸವದ ದ್ವಜಾರೋಹಣವನ್ನು ನೆರವೇರಿಸಿ ನುಡಿದರು.
ಶ್ರೀಮತಿಯವರು ಮುಂದುವರಿಯುತ್ತಾ, ಈ ದಿನವನ್ನು ಸಂಭ್ರಮ ಮತ್ತು ವಿಜೃಂಭಣೆಯಿಂದ ಆಚರಿಸುವುದಷ್ಟೆ ಅಲ್ಲ ಸ್ವಾತಂತ್ರ್ಯ ಹಾಗೂ ಸ್ವಚ್ಛಂದದ ನಡುವಿನ ಗೆರೆಯನ್ನು ಅರ್ಥಮಾಡಿಕೊಂಡು ಸ್ವಾತಂತ್ರ್ಯದ ಇತಿಮಿತಿಯಲ್ಲಿ ದೇಶಕ್ಕಾಗಿ ತಮ್ಮದೇ ಆದ ಕೊಡುಗೆಯನ್ನು ಸಲ್ಲಿಸಲು ಕಂಕಣಬದ್ಧರಾಗಬೇಕು ಕಾರಣ ಸ್ವತಂತ್ರ್ಯವನ್ನು ಪಡೆಯುವುದಕ್ಕಾಗಿ ಅನೇಕ ಮಹನೀಯರ ತ್ಯಾಗಬಲಿದಾನವಿದೆ ಆದುದರಿಂದ ಪ್ರತಿಯೊಬ್ಬ ನಾಗರೀಕರ ತಮ್ಮ ಕರ್ತ್ಯವನ್ನು ಅರಿತು ದೇಶದ ಪ್ರಗತಿಗೆ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮೈತ್ರಿ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲರಾದ ಶ್ರೀಮತಿ ದೇವನೀತಿ.ಆರ್ ರವರು, ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಶಾಲಿನಿ. ಜೆ, ಹಾಗೂ ಆಡಳಿತಅಧಿಕಾರಿಗಳಾದ ಶ್ರೀ ನಿಶಿತ್ ಕೆ. ಹೆಚ್ ರವರು, ಮೈತ್ರಿ ಶಿಕ್ಷಣ ಸಮೂಹದ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂಧಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕು. ಅಕ್ಷತಾ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಪ್ರೋ.ಶ್ರೀವಿನಯ್ ಕುಮಾರ್ .ಎಲ್ ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀಸಂತೋಷ್ ಕುಮಾರ್ ಎಂ.ಜೆ ವಂದಿಸಿದರೆ, ಪ್ರೋ. ಶೃತಿಯವರು ನಿರೂಪಿಸಿದರು. ವೇದಿಕೆಯ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.