ಗೂಂಬೆ ತಯಾರಿಕೆ ಮತ್ತು ತರಗತಿಯಲ್ಲಿ ಅದರ ಬಳಕೆಯ ಕುರಿತು ಕಾರ್ಯಕ್ರಮ
ಶಿಕ್ಷಕರು ತಮ್ಮ ಪಾಠದ ವಿಷಯಕ್ಕೆ ಪೂರಕವಾದ ಗೂಂಬೆಗಳನ್ನು ಬೋಧನೋಪಕರಣವಾಗಿ ಬಳಸಿ ಭೋಧಿಸುವುದರಿಂದ ತಮ್ಮ ಬೋಧನೆಯನ್ನು ಹೆಚ್ಚು ಪರಿಣಾಮಕಾರಿ ಹಾಗೂ ಜೀವಂತವಾಗಿಸಬಹುದು ಎಂದು ದಿನಾಂಕ 01/03/2019 ರ ಶನಿವಾರ ಬೆಳಗ್ಗೆ 10.00ಘಂಟೆಗೆ ಸರಿಯಾಗಿ ಮೈತ್ರಿ ಶಿಕ್ಷಣ ಮಹಾ ವಿದ್ಯಾಲಯದವತಿಯಿಂದ ಸಮಾಜಿಕ ಉಪಯುಕ್ತ ಉತ್ಪದನಾ ಕಾರ್ಯದ ಅಡಿಯಲ್ಲಿ ಗೂಂಬೆ ತಯಾರಿಕೆ ಮತ್ತು ತರಗತಿಯಲ್ಲಿ ಅದರ ಬಳಕೆಯ ಕುರಿತು ಹಮ್ಮಿಕೊಳ್ಳಲಾದ ಒಂದು ದಿನದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ.ಗೋಪಾಲ ಕೃಷ್ಣ ಕೊಳ್ತಾಯ, ನಿವೃತ್ತ ಪಾಂಶುಪಾಲರು,ರಾಷ್ಟೀಯ ಶಿಕ್ಷಣ ಮಹಾವಿದ್ಯಾಲಯ, ಶಿವಮೊಗ್ಗರವರು ಗೂಂಬೆ ತಯಾರಿಕೆಯ ಪಾತ್ಯಕ್ಷಿಕೆಯನ್ನು ನೀಡುತ್ತಾ ನುಡಿದರು
ಶ್ರೀಯುತರು ಕಾರ್ಯಾಗಾರದಲ್ಲಿ ಮನೆಯಲ್ಲಿ ಸುಲಭವಾಗಿ ಸಿಗುವ ಹಳೆಯ ದಿನ ಪತ್ರಿಕೆಯ ಸಹಾಯದಿಂದ ಸುಲಭವಾಗಿ ವಿವಿಧ ರೀತಿಯ ಗೊಂಬೆ ತಯಾರಿಸುವ ವಿಧಾನವನ್ನು ತಿಳಿಸಿಕೊಟ್ಟರು. ಕೇವಲ ಹಾಳೆಗಳು, ದಾರ, ಮೈದಾ ಅಂಟನ್ನು ಬಳಸಿ ಕಡಿಮೆ ಅವಧಿಯಲ್ಲಿ ಗೊಂಬೆ ತಯಾರಿಸ ಬಹುದಾದ ಕ್ರಮವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಅಲ್ಲದೇ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಗೊಂಬೆಗಳನ್ನು ಪ್ರಾಯೋಗಿಕವಾಗಿ ಮಾಡಿಸಿದರು. ಸೂತ್ರದ ಗೊಂಬೆಗಳನ್ನು ಮಾಡುವ ಹಾಗೂ ಅವುಗಳನ್ನು ಆಡಿಸುವ ಕ್ರಮವನ್ನೂ ಅತ್ಯಂತ ಸರಳವಾಗಿ ವಿದ್ಯಾರ್ಥಿಗಳ ಮನ ಮುಟ್ಟುವಂತೆ ಪ್ರತ್ಯಕ್ಷಿತೆ ನೀಡಿದರು. ಬಿ.ಇಡಿ ಪಠ್ಯಕ್ರಮದ ಭಾಗವಾದ ಶಿಕ್ಷಣದಲ್ಲಿ ರಂಗಕಲೆ ಎಂಬ ವಿಷಯಕ್ಕೆ ಪೂರಕವಾದ ಕಾರ್ಯಕ್ರಮ ಇದಾಗಿದ್ದು ಉದ್ದೇಶಿಸಿದ ಸಫಲತೆಯನ್ನು ಪಡೆಯುವಲ್ಲಿ ಸಹಕಾರಿ ಕಾರ್ಯಕ್ರಮವಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದಡಾ. ಶಾಲಿನಿ.ಜೆ ರವರು ಕಾರ್ಯಾಗಾರವು ಡಾ.ಗೋಪಾಲ ಕೃಷ್ಣ ಕೊಳ್ತಾಯರವರ ಅನುಭವ, ಆಸಕ್ತಿ ಮತ್ತು ಕ್ರಿಯಾಶೀಲ ಮನೋಭಾವದ ಪ್ರತಿ ರೂಪದಂತಿತ್ತು ಎಂದು ಕಾರ್ಯಾಗಾರ ಕುರಿತು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಶಿಕ್ಷಣಾರ್ಥಿ ಪೂರ್ಣಿಮರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದಕಾರ್ಯಕ್ರಮಕ್ಕೆ ಪ್ರಶಿಕ್ಷಣಾರ್ಥಿ ಸೀತಾಬಾಯಿ ಸ್ವಾಗತಿಸಿದರು.ಪ್ರಶಿಕ್ಷಣಾರ್ಥಿ ಕಲಾವತಿ ವಂದಿಸಿದರೆ, ನೇಹಾ ಫಿರ್ದೋಸ್ ನಿರೂಪಿಸಿದರು.