73ನೇ ಗಣರಾಜ್ಯೋತ್ಸವ ಕಾರ್ಯಕ್ರಮ
“ಯುವ ಜನತೆಯ ಪ್ರಗತಿಪರ ದೃಷ್ಠಿಕೋನ ಮತ್ತು ಉದಾತ್ತ ಚಿಂತನೆಯಿಂದ ಭವ್ಯ ಭಾರತ ನಿರ್ಮಾಣ ಸಾಧ್ಯ” ಎಂದು ಮೈತ್ರಿ ಶಿಕ್ಷಣ ಸಮೂಹದ ವತಿಯಿಂದ ಆಯೋಜಿಸಲಾಗಿದ್ದ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಗಳಾದ ಶ್ರೀಯುತ ನಿಶಿತ್ ಕೆ ಹೆಚ್‌ರವರು, ಧ್ವಜಾರೋಹಣವನ್ನು ನೆರವೇರಿಸಿದರು. ನಂತರದಲ್ಲಿ ಡಾ. ಶಾಲಿನಿ. ಜೆ, ಪ್ರಾಂಶುಪಾಲರು, ಮೈತ್ರಿ ಶಿಕ್ಷಣ ಮಹಾವಿದ್ಯಾಲಯ ಇವರು ತಮ್ಮ ಸಂದೇಶ ಭಾಷಣದಲ್ಲಿ ನುಡಿದರು.
ಇವರು ಮುಂದುವರೆಯುತ್ತಾ ಈ ಸುಸಂದರ್ಭದಲ್ಲಿ ಯುವ ಜನತೆಯು ದೇಶಕ್ಕ ತ್ಯಾಗ ಬಲಿದಾನ ನೀಡಿದ ಸ್ವತಂತ್ರ್ಯ ಹೋರಾಟಗಾರರ ಆಪಾರ ಕೊಡುಗೆಯನ್ನು ಸದಾ ಯುವ ಜನತೆ ಸ್ಮರಿಸಬೇಕು. ಹಾಗೆ ರಾಷ್ಟ್ರ ಅಭಿವೃದ್ಧಿಗೆ ತಮ್ಮ ಉದಾತ್ತ ಕೊಡಿಗೆಗಳನ್ನು ನೀಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೃತಿ .ಎನ್, ಸಂಸ್ಥೆಯ ಎಲ್ಲಾ ಬೋಧಕ ಬೋಧಕೇತರ ವರ್ಗದವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ವಿದ್ಯಾರ್ಥಿಗಳು ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮಲ್ಲಿ ರಾಷ್ಟ್ರೀಯ ಐಕ್ಯತೆಯನ್ನು ಬಿಂಬಿಸುವ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಶ್ರೀಮತಿ ವಸುಧರವರು ಪ್ರಾರ್ಥಿಸಿ, ಶ್ರೀಮತಿ ಅರ್ಚನ ರವರು ಸ್ವಾಗತಿಸಿದರು ಹಾಗೂ ಶ್ರೀಮತಿ ಗೀತಾ ರವರು ವಂದಿಸಿ, ಕಾರ್ಯಕ್ರಮವನ್ನು ಶ್ರೀಮತಿ ಸ್ಟಿಜಿ ಸ್ಯಾಮ್ಯುಲ್ ರವರು ನಿರೂಪಿಸಿದರು.