70 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ – 2016
ನಮ್ಮ ಸಾವಿರಾರು ಪೂರ್ವಜರ ತ್ಯಾಗ ಬಲಿದಾನದ ಫಲವೇ ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯಎಂದು ಶ್ರೀ. ಉದಯ್ ಕುಮಾರ್. ಬಿ.ಎಸ್, ಆಡಳಿತಾಧಿಕಾರಿಗಳು, ಮೈತ್ರಿ ಶಿಕ್ಷಣ ಸಮೂಹ, ಶಿವಮೊಗ್ಗ ಇವರು ಮೈತ್ರಿ ಕಾಲೇಜಿನ ಆವರಣದಲ್ಲಿ 70 ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಶ್ರೀಯುತರು ಮುಂದುವರೆಯುತ್ತಾ ಇಂದಿನ ಕೆಲವು ದೇಶ ವಿರೋಧಿ ಚಟುವಟಿಕೆಗಳ ಬೆಳವಣಿಗೆಗೆ ನಮ್ಮ ವಿಕೃತ ಮನ್ನಸ್ಸಿನ ಅನಾವರಣವೇ ಕಾರಣ, ಇಂತಹ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ನಿಮ್ಮಂತಹ ಯುವ ಜನತೆಯ ಪಾತ್ರ ಅತಿಮುಖ್ಯವಾದುದು. ದೇಶಕ್ಕಾಗಿ ಪ್ರಾಣಗೈದ ನಮ್ಮ ಹಿರಿಯರ ಬಗ್ಗೆ ಒಂದಿಷ್ಟನ್ನಾದರೂ ತಿಳಿದುಕೊಳ್ಳುವ ಸಂಕಲ್ಪ ಇಂದಿನಿಂದ ಮಾಡೋಣ ಎಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಪಿ.ಇ.ಎಸ್.ಐ.ಟಿ.ಎಂ ನ ಮೆಕ್ಯಾನಿಕಲ್ ಡಿಪಾರ್ಟ್‌ಮೆಂಟ್ ನ ಅಂತಿಮ ವರ್ಷದ ವಿದ್ಯಾರ್ಥಿಯಾದ ಶ್ರೀ. ಪೃಥ್ವಿ ಗೌಡ ರವರು ಸ್ವತಂತ್ರೋತ್ಸವ ಸಂದೇಶವನ್ನು ನೀಡುತ್ತಾ ನಮಗೆ ಕೇವಲ ಕೆಲವೇ ಕೆಲವು ವ್ಯಕ್ತಿಗಳ ತ್ಯಾಗದ ಫಲವಾಗಿ ಸ್ವಾತಂತ್ರ್ಯ ಬಂದಿಲ್ಲ; ಇದು ಅನೇಕರ ತ್ಯಾಗ ಬಲಿದಾನದ ಫಲ ಎಂದರು.
ಹಾಗೆಯೇ ತಮ್ಮ ಅನಿಸಿಕೆಗಳಲ್ಲಿ ದೇಶದ ಸ್ವತಂತ್ರಕ್ಕಾಗಿ ಹೋರಾಡಿದ ಕ್ರಾಂತಿಕಾರಿ ವೀರರ ಕಥೆಗಳನ್ನು ನೆನಪಿಸುತ್ತಾ ಪ್ರಸ್ತುತ ಯುವಜನತೆಯ ಜವಾಬ್ದಾರಿಯನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮೈತ್ರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ. ದೇವನೀತಿ ಆರ್. ಹಾಗೂ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶಾಲಿನಿ. ಜೆ ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ಪಣಿರೇಖಾರವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಅಭಿಲಾಷ್. ಸಿ.ಎನ್ ಸ್ವಾಗತಿಸಿದರೆ ವಿನಯ್. ಬಿ.ಪಿ ವಂದಿಸಿ, ಪ್ರಶಿಕ್ಷಣಾರ್ಥಿ ರಮ್ಯಾ. ಆರ್. ಪಾಟೀಲ್ ನಿರೂಪಿಸಿದರು.