68 ನೇ ಗಣರಾಜ್ಯೋತ್ಸವ ದಿನಾಚರಣೆ
![]() |
![]() |
![]() |
ತಂತ್ರಜ್ಞಾನ ಮತ್ತು ಆವಿಷ್ಕಾರ ಮನೋಭಾವನೆ ಇಂದಿನ ಯುವಜನತೆಯ ಜೀವನದ ಅವಿಭಾಜ್ಯ ಅಂಗವಾದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ಡಾ. ಶಾಲಿನಿ. ಜೆ, ಪ್ರಾಂಶುಪಾಲರು, ಮೈತ್ರಿ ಶಿಕ್ಷಣ ಮಹಾವಿದ್ಯಾಲಯ ಇವರು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 68 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಇವರು ಮುಂದುವರೆಯುತ್ತಾ ದೇಶದ ಪ್ರಗತಿ ರಾಷ್ಟ್ರದ ಯುವ ಜನತೆಯನ್ನು ಅವಲಂಭಿಸಿದ್ದು ಯುವ ಜನತೆಯು ರಾಷ್ಟ್ರದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಕರೆನೀಡಿದರು. ಹಾಗೂ ಪದವಿ ಪಡೆದ ವಿದ್ಯಾರ್ಥಿಗಳು ಜೀವನದಲ್ಲಿ ತಟಸ್ಥರಾಗಿ ವ್ಯರ್ಥ ಕಾಲಹರಣ ಮಾಡುವುದಕ್ಕಿಂತ ತಮ್ಮ ಜೀವನದುದ್ದಕ್ಕೂ ನಿರಂತರ ಕಲಿಯುವಿಕೆ ಮೂಲಕ ದೇಶಕ್ಕೆ ಕೊಡುಗೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮೈತ್ರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ದೇವನೀತಿ. ಆರ್ ರವರು ಉಪಸ್ಥಿತರಿದ್ದು ತಮ್ಮ ಗಣರಾಜ್ಯೋತ್ಸವದ ಸಂದೇಶದಲ್ಲಿ ಇಂದಿನ ಪ್ರತಿಯೊಬ್ಬ ನಾಗರೀಕನು ನಿರ್ವಹಿಸಬೇಕಾದ ಜವಾಬ್ದಾರಿಯನ್ನು ನೆನೆಪಿಸಿಕೊಟ್ಟರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಬೋಧಕ ಬೋಧಕೇತರ ವರ್ಗದವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ವಿದ್ಯಾರ್ಥಿಗಳು ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಕು. ಅಶ್ಲಿಬಾಬು ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಶೆರಿನ್ ಸ್ಯಾಮ್ ಸ್ವಾಗತಿಸಿದರೆ, ರಿಚು ರೋಸ್ ರಾಯ್ ವಂದಿಸಿದರು, ಕು. ಫಿತಾ ಬೇಗಂ ನಿರೂಪಿಸಿದರು.