69 ನೇ ಗಣರಾಜ್ಯೋತ್ಸವ ದಿನಾಚರಣೆ
“ಭಾರತ ದೇಶವನ್ನು ಮಾಲಿನ್ಯ ಮುಕ್ತ ಹಾಗೂ ಭ್ರಷ್ಟಚಾರಮುಕ್ತ ದೇಶವನ್ನಾಗಿಸೋಣ” ಎಂದು ಡಾ. ಶಾಲಿನಿ. ಜೆ, ಪ್ರಾಂಶುಪಾಲರು, ಮೈತ್ರಿ ಶಿಕ್ಷಣ ಮಹಾವಿದ್ಯಾಲಯ ಇವರು ಮೈತ್ರಿ ಶಿಕ್ಷಣ ಸಮೂಹದವತಿಯಿಂದ ಆಯೋಜಿಸಲಾಗಿದ್ದ 69 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಮಾತನಾಡಿದರು.
ಇವರು ಮುಂದುವರೆಯುತ್ತಾ ಭಾರತದ ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳಿಗೆ ಗೌರವ ನೀಡುವುದರ ಜೊತೆಗೆ ಸ್ವಚ್ಛ ಭಾರತ, ಹಸಿರು ಭಾರತವನ್ನಾಗಿಸೋಣ ಎಂದರು.
ಕಾರ್ಯಕ್ರಮದಲ್ಲಿ ಧ್ವಜಾರೋಣವನ್ನು ಮೈತ್ರಿ ಶಿಕ್ಷಣ ಸಮೂಹದ ಆಡಳಿತಾಧಿಕಾರಿಗಳಾದ ಶ್ರೀ ನಿಶಿತ್ ಕೆ ಹೆಚ್ ರವರು ನೆರವೇರಿಸಿ ತಮ್ಮ ಗಣರಾಜ್ಯೋತ್ಸವದ ಸಂದೇಶದಲ್ಲಿ ಇಂದಿನ ಪ್ರತಿಯೊಬ್ಬ ನಾಗರೀಕನು ನಿರ್ವಹಿಸಬೇಕಾದ ಜವಾಬ್ದಾರಿಯನ್ನು ನೆನೆಪಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಶ್ರೀಮತಿ ಶೃತಿ ಎನ್ ರವರು ಉಪಸ್ಥಿತರಿದ್ದರು. ಸಂಸ್ಥೆಯ ಎಲ್ಲಾ ಬೋಧಕ ಬೋಧಕೇತರ ವರ್ಗದವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ವಿದ್ಯಾರ್ಥಿಗಳು ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಕು. ಜಿಟ್ಟು ಕೆ ರಾಯ್ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಆಲ್ಫೋನ್ಸ ಆಲೆಕ್ಸ್ ಸ್ವಾಗತಿಸಿದರೆ, ಪ್ರೀಯ ಸಜೀವ್ ವಂದಿಸಿದರು, ಕು. ಸಲೋಮ್ ಸರ ಚಾಲ್ಸ್ ನಿರೂಪಿಸಿದರು.