70ನೇ ಗಣರಾಜ್ಯೋತ್ಸವ ದಿನಾಚರಣೆ
ಯುವಕರೆ ದೇಶದ ಸಂಪತ್ತು ದೇಶವನ್ನು ಮುನ್ನಡೆಸುವ ಜವಬ್ದಾರಿ ಯುವಕರ ಹೆಗಲ ಮೇಲಿದೆ ಎಂದು ಡಾ. ಶಾಲಿನಿ. ಜೆ, ಪ್ರಾಂಶುಪಾಲರು, ಮೈತ್ರಿ ಶಿಕ್ಷಣ ಮಹಾವಿದ್ಯಾಲಯ ಇವರು ಮೈತ್ರಿ ಶಿಕ್ಷಣ ಸಮೂಹದವತಿಯಿಂದ ಆಯೋಜಿಸಲಾಗಿದ್ದ 70 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸುತ್ತಾ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಮಾತನಾಡಿದರು.
ಇವರು ಮುಂದುವರೆಯುತ್ತಾ ಭಾರತದ ಜನಸಂಖ್ಯೆಯ ಬಹುಪಾಲು ಯುವ ಸಮುದಾಯದಿಂದ ಕೂಡಿದೆ. ಆದುದರಿಂದ ದೇಶದ ದಿಕ್ಕನ್ನು ಬದಲಿಸುವ ಶಕ್ತಿ ಯುವಕರಿಗಿದೆ, ಯುವಕರು ಧೃಡತೆ, ಔದ್ಯೋಗಿಕ ಸಾಮರ್ಥ್ಯ, ಆತ್ಮ ವಿಶ್ವಾಸ, ದೇಶಾಭಿಮಾನ ಮತ್ತು ದೇಶಕ್ಕೆ ತಮ್ಮಿಂದ ಏನಾದರೂ ಕೊಡುಗೆ ಕೊಡಬೇಕೆಂಬ ಹಂಬಲ ಮುಂತಾದ ಗುಣಗಳನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೈತ್ರಿ ಶಿಕ್ಷಣ ಸಮೂಹದ ಆಡಳಿತಾಧಿಕಾರಿಗಳಾದ ಶ್ರೀಯುತ ನಿಶಿತ್ ಕೆ ಹೆಚ್‌ರವರು, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೃತಿ .ಎನ್ ಸಂಸ್ಥೆಯ ಎಲ್ಲಾ ಬೋಧಕ ಬೋಧಕೇತರ ವರ್ಗದವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ವಿದ್ಯಾರ್ಥಿಗಳು ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮಲ್ಲಿ ಸ್ತಬ್ಧ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಕು. ಪ್ರಿಸಿಲ್ಲಾ ಮ್ಯಾಥ್ಯು ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಕು. ಹರ್ಷಮೊಲ್ ವಿ ಶಾಜಿ ಸ್ವಾಗತಿಸಿದರೆ, ನವಿತಾ ಸೂಸನ್ ಚಾಕೋ ವಂದಿಸಿದರು, ಕು.ಜಿಟ್ಟು ಕೆ ರಾಯ್ ನಿರೂಪಿಸಿದರು