73 ನೇ ಸ್ವಾತಂತ್ರ್ಯದಿನಾಚರಣೆ
ಜಾತಿ ಭೇದಭಾವ ಮರೆತು ನಾವೆಲ್ಲರು ಭಾರತೀಯರು ಎಂಬ ಭಾವನೆಯೊಂದಿಗೆ ದೇಶದ ಏಳಿಗೆಗಾಗಿ ಶ್ರಮಿಸೋಣ .
ಎಂದು ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಶ್ರೀಯುತ ಶ್ರೀ ನಿಶಿತ್ ಕೆ. ಹೆಚ್ ರವರು, ಮೈತ್ರಿ ಶಿಕ್ಷಣ ಸಮೂಹ, ನಿರ್ದೇಶಕರು, ಜನ ಶಿಕ್ಷಣ ಸಂಸ್ಥಾನ, ಶಿವಮೊಗ್ಗ ಇವರು ಮೈತ್ರಿ ಕಾಲೇಜಿನದಲ್ಲಿ ಹಮ್ಮಿಕೊಳ್ಳಲಾಗಿದ್ದ 73 ನೇ ಸ್ವತಂತ್ರ್ಯೋತ್ಸವದ ದ್ವಜಾರೋಹಣವನ್ನು ನೆರವೇರಿಸಿ ನುಡಿದರು.
ಶ್ರೀಮತಿಯವರು ಮುಂದುವರಿಯುತ್ತಾ, ಈ ದಿನ ದೇಶದ ಚಿತ್ರಣ ಬದಲಾದ ದಿನ ಆದುದರಿಂದ ಭಾರತೀಯರಾದ ನಾವೆಲ್ಲರೂ ದೇಶಕ್ಕಾಗಿ ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತ ಆ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಯುವಕ ಯವತಿಯರು ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕೆಂದು ಕರೆನೀಡಿದರು. ಹಾಗೆಯೇ ಸ್ವಚ್ಛ ಭಾರತ ಸ್ವಸ್ಥ ಭಾರತದ ಕಡೆಗೆ ಪ್ರಾಮುಖ್ಯತೆಯನ್ನು ನೀಡಬೇಕೆಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಶಾಲಿನಿ. ಜೆ, ರವರು ತಮ್ಮ ಸ್ವಾತಂತ್ರ್ಯ ದಿನದ ಸಂದೇಶದಲ್ಲಿ ಈ ದಿನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಮೈತ್ರಿ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲರಾದ ಶ್ರೀಮತಿ ಶೃತಿ. ಎನ್ ರವರು, ಮೈತ್ರಿ ಶಿಕ್ಷಣ ಸಮೂಹದ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂಧಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕು. ಸಹನ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಪ್ರಶಿಕ್ಷಣಾರ್ಥಿ ಕು. ಸಾನಿಯ ಫಾತಿಮಾ ಸ್ವಾಗತಿಸಿದರು. ಕು. ಸ್ವಾತಿ ವಂದಿಸಿದರೆ, ಕು. ರಿಜಿನಾ ಲಿಬಿ ಯವರು ನಿರೂಪಿಸಿದರು. ವೇದಿಕೆಯ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.