71 ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ
“ನಮ್ಮ ನಾಯಕರ ಪರಿಶ್ರಮದ ಫಲವಾಗಿ ಶ್ರೇಷ್ಠ ಸಂವಿಧಾನ ನಿರ್ಮಾಣವಾಗಿದೆ ಈ ಸಂವಿಧಾನವನ್ನು ಸೂಕ್ತವಾಗಿ ಅರಿತು ನಡೆಯುವುದು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯಾಗಿದೆ ” ಎಂದು ಶ್ರೀಮತಿ ಅರುಣಾ ದೇವಿ ಎಸ್. ವೈ, ಸಹ ಕಾರ್ಯದರ್ಶಿಗಳು ಮೈತ್ರಿ ಶಿಕ್ಷಣ ಸಮೂಹ ಇವರು ಮೈತ್ರಿ ಶಿಕ್ಷಣ ಸಮೂಹದ ವತಿಯಿಂದ ಆಯೋಜಿಸಲಾಗಿದ್ದ 71ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸುತ್ತಾ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಮಾತನಾಡಿದರು.
ಇವರು ಮುಂದುವರೆಯುತ್ತಾ ಪ್ರಸ್ತುತ ಅನೇಕ ಹೊಸ ಹೊಸ ಕಾಯ್ದೆಗಳು ಭಾರತದಲ್ಲಿಜಾರಿಯಾಗುತ್ತಿದ್ದು ಕಾಯ್ದೆಗಳ ಕುರಿತು ಇರುವ ಭಿನ್ನಾಭಿಪ್ರಾಯಗಳಿಗೆ ಕಿವಿಗೊಡದೆ ಅವುಗಳನ್ನು ಸೂಕ್ತವಾಗಿ ಅರಿತು ಸಂವಿಧಾನದ ಶ್ರೇಷ್ಠತೆಂiiನ್ನು ಸದಾ ಗೌರವಿಸುವಂತಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮೈತ್ರಿ ಶಿಕ್ಷಣ ಸಮೂಹದ ಆಡಳಿತಾಧಿಕಾರಿಗಳಾದ ಶ್ರೀಯುತ ನಿಶಿತ್ ಕೆ ಹೆಚ್‌ರವರು, ಡಾ. ಶಾಲಿನಿ. ಜೆ, ಪ್ರಾಂಶುಪಾಲರು, ಮೈತ್ರಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೃತಿ .ಎನ್, ಸಂಸ್ಥೆಯ ಎಲ್ಲಾ ಬೋಧಕ ಬೋಧಕೇತರ ವರ್ಗದವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ವಿದ್ಯಾರ್ಥಿಗಳು ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮಲ್ಲಿ ರಾಷ್ಟ್ರೀಯ ಐಕ್ಯತೆಯನ್ನು ಬಿಂಬಿಸುವ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಕು. ಪ್ರೇಮ ಮತ್ತು ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ. ಕು. ಮೇರಿಯೆಟ್ ಜಾರ್ಜ್ ಸ್ವಾಗತಿಸಿದರೆ, ಕು. ರೆಜಿನಾ ಲಿಬಿ ವಂದಿಸಿದರು, ಕು. ರಮ್ಯಶ್ರೀ ಜೆ ನಿರೂಪಿಸಿದರು