74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ
ಭಾರತೀಯರಾದ ನಾವು ಈ ಸ್ವಾತಂತ್ರ್ಯದ ಸುದಿನದಂದು ಸ್ವದೇಶಿಯ ಅಭಿಮಾನ ಬೆಳೆಸಿಕೊಂಡು ಸ್ವಾವಲಂಭಿ ಭಾರತವನ್ನು ನಿರ್ಮಾಣ ಮಾಡುವ ಪಣ ತೊಡಬೇಕು ಎಂದು ಶ್ರೀಮತಿ ಅರುಣಾದೇವಿ ಎಸ್. ವೈ ರವರು, ಮೈತ್ರಿ ಶಿಕ್ಷಣ ಸಮೂಹ, ನಿರ್ದೇಶಕರು, ಜನ ಶಿಕ್ಷಣ ಸಂಸ್ಥಾನ, ಶಿವಮೊಗ್ಗ ಇವರು ಮೈತ್ರಿ ಕಾಲೇಜಿನದಲ್ಲಿ ಹಮ್ಮಿಕೊಳ್ಳಲಾಗಿದ್ದ 74 ನೇ ಸ್ವತಂತ್ರ್ಯೋತ್ಸವದ ದ್ವಜಾರೋಹಣವನ್ನು ನೆರವೇರಿಸಿ ನುಡಿದರು.
ಶ್ರೀಮತಿಯವರು ಮುಂದುವರಿಯುತ್ತಾ, ಭಾರತೀಯರಾದ ನಾವೆಲ್ಲರೂ ದೇಶಕ್ಕಾಗಿ ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದರ ಜೊತೆಗೆ ಪ್ರಸ್ತುತ ನಮ್ಮ ದೇಶವು ಎದುರಿಸುತ್ತಿರುವ ಆನೇಕ ಸವಾಲುಗಳ ಅರಿವು ಸಹ ಪ್ರತಿಯೊಬ್ಬ ಪ್ರಜೆಗಳಿಗೆಗಿರಬೇಕು. ಯುವ ಪೀಳಿಗೆಯು ವಿಜ್ಞಾನ ತಂತ್ರಜ್ಞಾನಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡಿ ದೇಶದ ಆರ್ಥಿಕ ಪ್ರಗತಿಗೆ ತಮ್ಮನ್ನು ತಾವು ತೊಡಗಿಸಕೊಳ್ಳಬೇಕೆಂದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಣದ ಆಡಳಿತಾಧಿಕಾರಿಗಳಾದ ಶ್ರೀ ನಿಶಿತ್ ಕೆ. ಹೆಚ್, ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಶಾಲಿನಿ. ಜೆ, ರವರು ಮತ್ತು ಮೈತ್ರಿ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲರಾದ ಶ್ರೀಮತಿ ಶೃತಿ. ಎನ್ ರವರು, ಮೈತ್ರಿ ಶಿಕ್ಷಣ ಸಮೂಹದ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂಧಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಶ್ರೀಮತಿ ವಸುಧಾರವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಕು. ವರ್ಷಿತಾ ಟಿ. ಜಿ ಗೌಡ ಸ್ವಾಗತಿಸಿದರು. ಕು. ಬ್ಯುಲಾ ಕುಮಾರಿ ಪಿ.ಜೆ ಯವರು ನಿರೂಪಿಸಿದರು. ವೇದಿಕೆಯ ಕಾರ್ಯಕ್ರಮದ ನಂತರ ಬೋಧಕ ವರ್ಗದವರಿಂದ ಸಮೂಹಗಾನ ಹಮ್ಮಿಕೊಳ್ಳಲಾಗಿತ್ತು.