Mythri Lower and Higher Primary School,  Shikaripura

Mythri Lower and Higher Primary School

Shikaripura
  08187-224378
  khsmythri@gmail.com
Home > Latest Updates > ತಾಲ್ಲೂಕ ಮಟ್ಟದ ವಿಜ್ಞಾನ ರಸ ಪ್ರಶ್ನೆ ಕಾರ್ಯಕ್ರಮ

ತಾಲ್ಲೂಕ ಮಟ್ಟದ ವಿಜ್ಞಾನ ರಸ ಪ್ರಶ್ನೆ ಕಾರ್ಯಕ್ರಮ

1 2
3 4

ವೈಜ್ಞಾನಿಕ ಚಿಂತನೆಗಳು, ಆವಿಷ್ಕಾರಗಳು & ಸಂಶೋಧನೆಗಳು ಬೌದ್ಧಿಕ ಬೆಳವಣಿಗೆಗೆ ಪುಷ್ಠಿ ನೀಡುತ್ತವೆ ಎಂದು ಶ್ರೀಮತಿ ತೇಜಸ್ವಿನಿ ರಾಘವೇಂದ್ರ ಹೇಳಿದರು. ಪಟ್ಟಣದ ಮೈತ್ರಿ ಶಾಲೆಯಲ್ಲಿ ಆಯೋಜಿಸಿದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ & ಬಿ.ಎಸ್. ಯಡಿಯೂರಪ್ಪ ನವರ ಜನ್ಮ ದಿನಾಚರಣೆ ಅಂಗವಾಗಿ ತಾಲ್ಲೂಕ ಮಟ್ಟದ ವಿಜ್ಞಾನ ರಸ ಪ್ರಶ್ನೆ ಕಾರ್ಯಕ್ರಮ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು 1928 ಫೆಬ್ರವರಿ 28 ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ.ವಿ ರಾಮನ್ ಅವರು ರಾಮನ್ ಪರಿಣಾಮ ಎಂದೇ ಪ್ರಸಿದ್ದವಾದ ತಮ್ಮ ಸಂಶೋಧನೆಯ ವಿವರಗಳನ್ನು ಜಗತ್ತಿಗೆ ತಿಳಿಸಿದ ದಿನ ಎಂದರು. ಕೋಲ್ಕತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್ನಲ್ಲಿ ರಾಮನ್ ಅವರು ತಮ್ಮ ಸಹೋದ್ಯೋಗಿಗಳೂಡನೆ ನಡೆಸಿದ ಸಂಶೋಧನೆಗಳ ಪರಿಣಾಮವೇ ಈ ಅಪೂರ್ವ ಸಂಶೋಧನೆ ಎಂದರು. ಇದೇ ಸಂಶೋಧನೆಗಾಗಿ ಅವರಿಗೆ 1930 ರಲ್ಲಿ ನೊಬೆಲ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊಟ್ಟ ಮೊದಲ ನೊಬೆಲ್ ಪುರಸ್ಕಾರವೂ ಹೌದು ಎಂದರು.
ಇಂದಿನ ದಿನಗಳಲ್ಲಿ ವಿಜ್ಞಾನ ಚಿಂತನೆಗಳು ನಮ್ಮನ್ನು ಉನ್ನತ ಮಟ್ಟದ ಸಾಧನೆಗೈಯಲು ಸಾಧ್ಯ ಮಾಡುತ್ತವೆ ಎಂದು ಹೇಳುತ್ತಾ ಪ್ರತಿನಿತ್ಯ ಬಳಸುವ ವಸ್ತುಗಳು ಕೂಡ ವಿಜ್ಞಾನ ಅವಿಷ್ಕಾರದ ಪ್ರತೀಕ ಎಂದರು. ವಿದ್ಯಾರ್ಥಿಗಳು ಹೆಚ್ಚು ವೈಜ್ಞಾನಿಕ ಚಿಂತನೆಗಳ ಕಡೆ ಗಮನ ಹರಿಸಿ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕುಮದ್ವತಿ ವಸತಿ ಕೇಂದ್ರಿಯ ಶಾಲೆಯ ಪ್ರಾಂಶುಪಾಲರಾದ ಲಿಂಗರಾಜು ಮಾತನಾಡಿ ರಾಮನ್‌ರವರ ಸಂಶೋಧನೆ ಇಂದಿಗೂ ಜೀವಂತ ಪ್ರಕ್ರಿಯೆಯಾಗಿದೆ. ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಜೈವಿಕ ತಂತ್ರಜ್ಞಾನ, ಭಾರತೀಯ ವಿಜ್ಞಾನಿಗಳು ಅಪಾರ ಸಾಧನೆ ಮಾಡಿದ್ದಾರೆ ಎಂದರು.
ರಾಮನ್‌ರವರ ಸಂಶೋಧನೆಯ ಬಗ್ಗೆ ಹೇಳುತ್ತಾ ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ರಾಮನ್ ಅವರಿಗೆ ಸಮುದ್ರ ಏಕೆ ಯಾವಾಗಲೊ ನೀಲಿಯಾಗಿಯೇ ಕಾಣುತ್ತದೆ ಎಂಬ ಪ್ರಶ್ನೆ ಎದುರಾಯಿತಂತೆ, ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೆನಾದರೂ ಗುಟ್ಟು ಅಡಗಿದೆಯೂ ಎಂದು ಪತ್ತೆ ಮಾಡಲು ಹೊರಟ ರಾಮನ್ ಸೂರ್ಯನ ಬೆಳಕು ನೀರಿನಲ್ಲಿ ಹರಡಿ ಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡು ಹಿಡಿದರು. ಇದೇ ಅಂಶ ಮುಂದೆ  ರಾಮನ್ ಪರಿಣಾಮ ದ ಸಂಶೋಧನೆಗೆ ಪ್ರೇರಣೆಯಾಯಿತು. ರಾಮನ್ ಪರಿಣಾಮ  ಸಂಶೋಧನೆಯ ವಿವರಗಳು ಪ್ರಕಟವಾದ ಆ ಚಾರಿತ್ರಿಕ ದಿನದ ನೆನಪಿನಲ್ಲಿ ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.
ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟೀಯ ವಿಜ್ಞಾನ ದಿನ ಆಚರಣೆಯ ಉದ್ದೇಶಗಳಲ್ಲೊಂದು ಎಂದರು.
ರಸಪ್ರಶ್ನೆ ಕಾರ್‍ಯಕ್ರಮಕ್ಕೆ ಪ್ರಾಥಮಿಕ ವಿಭಾಗದಿಂದ 8 ತಂಡಗಳು ಭಾಗವಹಿಸಿದ್ದು, ಅದರಲ್ಲಿ ಉಸಾಮ ಶಾಲೆ ಪ್ರಥಮ, ದ್ವೀತಿಯ ಪ್ರಕೃತಿಶಾಲೆ ಮತ್ತು ಕೆ.ಆರ್.ಸಿ.ಎಸ್ ತೃತೀಯ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ದಯಾನಂದ ಕೆ ಆರ್, ಕು.ಗಾಯಿತ್ರಿ ಭಟ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಲಲಿತಾ ಮಾಡಿದರೆ ಮುಖ್ಯಶಿಕ್ಷಕ ವಿಶ್ವನಾಥ ಪಿ ಸ್ವಾಗತಿಸಿ ಮಂಜುನಾಥ್ ಡಿ ವಂದಿಸಿದರು..